ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಮಂಗಳವಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆ ಪ್ರಮಾಣವನ್ನ -9 ಶೇಕಡಾದಿಂದ -7.7 ಶೇಕಡಾಗೆ ಏರಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ಈ ದೇಶದ ಅರ್ಥ ವ್ಯವಸ್ಥೆ 10 ಶೇಕಡಾಗೆ ಏರಿಕೆಯಾಗುವ ನಿರೀಕ್ಷೆ ಇದೆ.
ಪ್ರಸಕ್ತ ವರ್ಷದಲ್ಲಿ ಸೆಪ್ಟೆಂಬರ್ ತ್ರೈ ಮಾಸಿಕದಲ್ಲಿ ದೇಶದ ಅರ್ಥ ವ್ಯವಸ್ಥೆ ನಿರೀಕ್ಷೆಗಿಂತ ವೇಗವಾಗಿ ಚೇತರಿಕೆ ಕಂಡಿದೆ. ಜುಲೈ – ಸೆಪ್ಟೆಂಬರ್ ತ್ರೈ ಮಾಸಿಕದಲ್ಲಿ ದೇಶದ ಜಿಡಿಪಿ 7.5 ಶೇಕಡಾಗೆ ಕುಸಿತ ಕಂಡಿತ್ತು.
ಆದರೆ ಇದೀಗ ದೇಶದ ಅರ್ಥ ವ್ಯವಸ್ಥೆ ಸುಧಾರಣೆ ಕಂಡಿದ್ದು ಜನರು ಕೊರೊನಾದೊಂದಿಗೆ ಬದುಕೋದನ್ನ ರೂಢಿಸಿಕೊಂಡಿದ್ದಾರೆ ಅನ್ನೋದು ಸ್ಪಷ್ಟವಾಗಿದೆ ಅಂತಾ ಎಸ್ & ಪಿ ಗ್ಲೋಬಲ್ ಸೂಚ್ಯಂಕ ಹೇಳಿದೆ.