ಇನ್ನೊಂದು ತಿಂಗಳಲ್ಲಿ ದೇಶ ಹಿಂದೆಂದೂ ಕಂಡಿರದಂತಹ ಬಜೆಟ್ನ್ನ ಕೇಂದ್ರ ಸರ್ಕಾರ ಮಂಡಿಸಲಿದೆ ಅಂತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭವಿಷ್ಯ ನುಡಿದಿದ್ದಾರೆ. ಈ ಬಜೆಟ್ ಕೊರೊನಾ ವೈರಸ್ನಿಂದ ಉಂಟಾದ ಆರ್ಥಿಕ ಸಂಕಷ್ಟವನ್ನ ಕಡಿಮೆ ಮಾಡಬಹುದೇ..? ದೇಶದಲ್ಲಿ ಆರ್ಥಿಕ ಬೆಳವಣಿಗೆಗೆ ಈ ಬಜೆಟ್ ಪೂರಕವಾಗಬಲ್ಲದೇ ಸೇರಿದಂತೆ ಸಾಕಷ್ಟು ನಿರೀಕ್ಷೆಗಳನ್ನ ಹೊಂದಿದೆ.
ಕೈಗಾರಿಕಾ ಉತ್ಪಾದನೆ ಹೆಚ್ಚು ಮಾಡಿದರೂ ಸಹ ಅದನ್ನ ಕೊಳ್ಳುವ ಗ್ರಾಹಕರ ಭಾವನೆಯನ್ನೂ ಉತ್ತೇಜಿಸಬೇಕಿದೆ. ನಿರುದ್ಯೋಗಿತನ ಕೂಡ ಇನ್ನಷ್ಟು ಹೆಚ್ಚಾಗಿದ್ದು ಈ ನಿಟ್ಟಿನಲ್ಲೂ ಗಮನ ಹರಿಸಬೇಕಾದ ಅವಶ್ಯಕತೆಯಿದೆ.
ಲಾಕ್ಡೌನ್ನಿಂದಾಗಿ ಆಟೋ ಸೇರಿದಂತೆ ಸಾರಿಗೆ ವಲಯಗಳು ತೀವ್ರ ಹೊಡೆತವನ್ನ ಅನುಭವಿಸಿವೆ. ಆದರೆ ಈ ನಿಟ್ಟಿನಲ್ಲಿ ಹೆಲ್ತ್ಕೇರ್, ಐಟಿ ಸೇರಿದಂತೆ ವಿವಿಧ ಕಂಪನಿಗಳು ಬಲವಾದ ಗಳಿಕೆಯನ್ನ ಕಂಡಿವೆ. ಡಿಜಿಟಲ್ ತಂತ್ರಜ್ಞಾನ ಕೂಡ ಬೆಳವಣಿಗೆ ಕಂಡಿದೆ.
ಹೊಸ ಅಲೆಯ ಸೋಂಕಿನ ಸವಾಲಿನ ಹೊರತಾಗಿಯೂ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಮತ್ತು ಲಸಿಕೆಗಳ ಬಗ್ಗೆ ಸಕಾರಾತ್ಮಕ ಸುದ್ದಿಗಳು ಜಾಗತಿಕ ಆರ್ಥಿಕತೆಯ ಭವಿಷ್ಯದ ಮೇಲೆ ನಿರಂತರ ಪರಿಣಾಮ ಬೀರಬಹುದು.
ನವೆಂಬರ್ ಆರಂಭದವರೆಗೆ ರ್ಯಾಲಿಗಳು ಮತ್ತು ಮಾರಾಟದ ನಡುವೆ ನಡೆಯುತ್ತಿದ್ದ ಇಕ್ವಿಟಿ ಮಾರುಕಟ್ಟೆಗಳು ಹಿಂದಿನ ಹಿಂದಿನ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿವೆ ಡಿಸೆಂಬರ್ 20, 2020 ರವರೆಗೆ, ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಕ್ರಮವಾಗಿ ಶೇಕಡಾ 13 ಮತ್ತು 12 ರಷ್ಟು ಏರಿಕೆಯಾಗಿದೆ.