ನವದೆಹಲಿ:ಡಿಸೆಂಬರ್ ತಿಂಗಳ ಮೊದಲ 15 ದಿನಗಳಲ್ಲಿ ಭಾರತದ ಡೀಸೆಲ್ ಮಾರಾಟದ ಪ್ರಮಾಣದಲ್ಲಿ ಶೇ. 5.2 ರಷ್ಟು ಇಳಿಕೆ ಕಂಡಿದೆ. ರಾಜ್ಯದ ಇಂಧನ ರೀಟೇಲ್ ಮಾರಾಟದ ಕುರಿತು ಪಾರ್ಲಿಮೆಂಟರಿ ಡೇಟಾ ಈ ಮಾಹಿತಿಯನ್ನು ಹೊರ ಹಾಕಿದೆ.
ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಭಾರತದಲ್ಲಿ ಇದುವರೆಗೂ ಕೋವಿಡ್ 19 ಪರಿಣಾಮಗಳು ಕಡಿಮೆಯಾಗಿಲ್ಲ ಎಂಬುದನ್ನು ಇದು ತೋರಿಸುತ್ತವೆ ಎಂದು ವಿಶ್ಲೇಷಿಸಲಾಗಿದೆ.
ಡೀಸೆಲ್ ಬಳಕೆ ದೇಶದ ಆರ್ಥಿಕತೆ ವೃದ್ಧಿಯನ್ನು ತೋರಿಸುತ್ತದೆ. ಒಟ್ಟಾರೆ ಪರಿಷ್ಕೃತ ಇಂಧನ ಬಳಕೆಯಲ್ಲಿ ಶೇಕಡ 40 ರಷ್ಟು ಎಂದರೆ, 2.8 ಮಿಲಿಯನ್ ಟನ್ ಗಳಷ್ಟು ಈ ತಿಂಗಳ ಮೊದಲಾರ್ಧದಲ್ಲಿ ಇಳಿಕೆಯಾಗಿದೆ ಎಂದು ದಾಖಲೆಗಳು ಹೇಳುತ್ತವೆ.
ಉತ್ಪಾದನಾ ಕಾರ್ಖಾನೆಗಳು ಕೊರೊನಾ ವೈರಸ್ ಕಾರಣಕ್ಕೆ ತಮ್ಮ ಉತ್ಪಾದನೆಗಳಿಗೆ ಬೇಡಿಕೆ ಕಳೆದುಕೊಂಡಿವೆ. ಇದರಿಂದ ನಷ್ಟ ಅನುಭವಿಸಿದ್ದು, ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕಳೆದ ತಿಂಗಳ ಖಾಸಗಿ ಸರ್ವೆಯೊಂದು ಹೇಳಿತ್ತು. ಡೀಸೆಲ್ ಮಾರಾಟ ಪ್ರಮಾಣ ಇಳಿಕೆಯೂ ಇದಕ್ಕೆ ಸಂಬಂಧಿಸಿದೆ ಎನ್ನಲಾಗಿದೆ.