ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದೆ. ಸ್ಯಾನಿಟೈಜರ್ ಬಳಸುವಂತೆ ವೈದ್ಯರು ಸಲಹೆ ನೀಡ್ತಿದ್ದಾರೆ. ಇದ್ರಿಂದ ಸ್ಯಾನಿಟೈಜರ್ ಮಾರಾಟ ವೇಗವಾಗಿ ಹೆಚ್ಚಾಗಿದೆ. ದೇಶದಲ್ಲಿ ಸ್ಯಾನಿಟೈಜರ್ ಮಾರುಕಟ್ಟೆ ಶೇಕಡಾ 7ರಿಂದ 8 ಪಟ್ಟು ಹೆಚ್ಚಳವಾಗಿದೆ.
ಮಹಾರಾಷ್ಟ್ರದ ಅಂಗಡಿಯೊಂದರಲ್ಲಿ 2017 ರಲ್ಲಿ 43,000 ರೂಪಾಯಿ ಮೌಲ್ಯದ ಸ್ಯಾನಿಟೈಜರ್ ಮಾರಾಟವಾಗಿತ್ತು 2018 ರಲ್ಲಿ 53,000 ರೂಪಾಯಿ ಮೌಲ್ಯದ ಸ್ಯಾನಿಟೈಜರ್ ಮಾರಾಟವಾಗಿತ್ತು.
2019 ರಲ್ಲಿ ಜನರು 58,000 ರೂಪಾಯಿ ಮೌಲ್ಯದ ಸ್ಯಾನಿಟೈಜರ್ ಖರೀದಿಸಿದ್ದರು. 2020 ಜನವರಿಯಿಂದ ಮಾರ್ಚ್ ನಡುವೆ 1,12,143 ರೂಪಾಯಿ ಮೌಲ್ಯದ ಸ್ಯಾನಿಟೈಜರ್ ಮಾರಾಟವಾಗಿತ್ತು. ಕೊರೊನಾ ಹೆಚ್ಚಾದ ನಂತ್ರ ಏಪ್ರಿಲ್ 1 ರಿಂದ ಜುಲೈ 31ರ ಮಧ್ಯೆ 10,25,877 ರೂಪಾಯಿಗಳ ಸ್ಯಾನಿಟೈಜರ್ ಮಾರಾಟವಾಗಿದೆ.
ಕೊರೊನಾಗಿಂತ ಮೊದಲು ಸ್ಯಾನಿಟೈಜರ್ ಮಾರುಕಟ್ಟೆ 100-300 ಕೋಟಿಯಿತ್ತು. ಕೊರೊನಾ ನಂತ್ರ 250 ದೊಡ್ಡ ಕಂಪನಿಗಳು ಸ್ಯಾನಿಟೈಜರ್ ಕ್ಷೇತ್ರಕ್ಕಿಳಿದಿವೆ. ಈಗ ಅಂದಾಜಿನ ಪ್ರಕಾರ, ದೇಶದ ಸ್ಯಾನಿಟೈಜರ್ ಮಾರುಕಟ್ಟೆ ವಾರ್ಷಿಕವಾಗಿ 30,000 ಕೋಟಿ ರೂಪಾಯಿಗೆ ತಲುಪಿದೆ.