ಬ್ರಿಟನ್ ಮೂಲದ ಭಾರತೀಯ ಹುಡುಗಿಯೊಬ್ಬಳು ಟಿಕ್ ಟಾಕ್ ಮಾದರಿಯಲ್ಲೇ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಒಂದನ್ನ ಕಂಡು ಹಿಡಿದಿದ್ದಾಳೆ. ಚೀನಾ ಅಭಿವೃದ್ಧಿ ಪಡಿಸಿದ ಟಿಕ್ ಟಾಕ್ ಮಾದರಿಯ ಈ ಅಪ್ಲಿಕೇಶನ್ಗೆ theek-thaak ಎಂದು ಹೆಸರಿಡಲಾಗಿದೆ.
17 ವರ್ಷದ ಸೈನಾ ಸೋಧಿ ಎಂಬವರು ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಸೈನಾ, ಟಿಕ್ಟಾಕ್ ಒಂದು ಶಕ್ತಿಯುತ ಸಾಮಾಜಿಕ ಜಾಲತಾಣದ ವೇದಿಕೆಯಾಗಿದೆ. ಆದರೆ ಭಾರತೀಯ ಶೈಲಿಯ ವಿಡಿಯೋ ಅಪ್ಲಿಕೇಶನ್ ಬರಬೇಕು ಎಂದು ನನಗನಿಸಿತು. ಹೀಗಾಗಿ ನಾನು ಈ ಅಪ್ಲಿಕೇಶನ್ ಕಂಡು ಹಿಡಿದೆ ಎಂದು ಹೇಳಿದ್ದಾರೆ.
ಈ ಅಪ್ಲಿಕೇಶನ್ ಹಸಿರು, ಬಿಳಿ ಹಾಗೂ ಕೇಸರಿ ಬಣ್ಣದಲ್ಲಿದೆ. ಈ ಮೂಲಕ ಭಾರತದ ತ್ರಿವರ್ಣ ಧ್ವಜವನ್ನ ಪ್ರತಿನಿಧಿಸಲಾಗಿದೆ. ಭಾರತೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಅಪ್ಲಿಕೇಶನ್ನ್ನು ಅಭಿವೃದ್ಧಿ ಪಡಿಸಲಾಗಿದೆ. theek-thaak ಅನ್ನೋದು ಹಿಂದಿ ಭಾಷೆಯಾಗಿದ್ದು ಅದರ ಅರ್ಥ ಎಲ್ಲವೂ ಸರಿಯಾಗಿದೆ ಎಂದಾಗಿದೆ.