ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧನೆಯ ಫಲವಾಗಿ ಉಗಾಂಡಾದಲ್ಲಿ ಭಾರತೀಯ ತಳಿ ಸೂರ್ಯಕಾಂತಿ ಬೆಳೆಯಲು ಆರಂಭಿಸಿದೆ. ಪೂರ್ವ ಆಫ್ರಿಕದ ರಾಷ್ಟ್ರಗಳಲ್ಲಿ ಸೂರ್ಯಕಾಂತಿ ಸಸ್ಯಗಳು ಬೆಳೆಯಬಹುದಾದ ರೀತಿಯಲ್ಲಿ ಹೈಬ್ರಿಡ್ ಬೀಜವನ್ನ ಉತ್ಪಾದಿಸಿದ ಕೀರ್ತಿ ಈ ವಿವಿಗೆ ಸಲ್ಲುತ್ತದೆ.
ಈ ವಿಚಾರವಾಗಿ ಮಾತನಾಡಿದ ಸಂಶೋಧನಾ ನಿರ್ದೇಶಕ ವೈ.ಜಿ. ಷಡಕ್ಷರಿ, ಸೂರ್ಯಕಾಂತಿಯ ಕೆಬಿಎಸ್ಹೆಚ್ 41 ತಳಿ ಆಫ್ರಿಕಾದಲ್ಲಿ ಈಗಾಗಲೇ ಜನಪ್ರಿಯವಾಗಿದೆ. ಇದೀಗ ಉಗಾಂಡಾಕ್ಕೆ ಕೆಬಿಎಸ್ಹೆಚ್ 53 ತಳಿ ಕಳುಹಿಸಲಾಗಿದ್ದು ಅದೂ ಸಹ ಉತ್ತಮ ಫಸಲನ್ನ ನೀಡೋಕೆ ಆರಂಭಸಿದೆ ಅಂತಾ ಹೇಳಿದ್ರು.
ಉಗಾಂಡಾ ರಾಷ್ಟ್ರ ಭಾರತದ ಸೂರ್ಯಕಾಂತಿ ಬೆಳೆಯುವ ಉದ್ಯಮದ ಮೇಲೆ ಆಸಕ್ತಿ ತೋರಿಸಿತ್ತು. ಹೀಗಾಗಿ ಎರಡೂ ರಾಷ್ಟ್ರಗಳ ನಡುವೆ ಈ ಸಂಬಂಧ ಒಪ್ಪಂದ ಕೂಡ ನಡೆದಿತ್ತು. ಒಪ್ಪಂದದ ಭಾಗವಾಗಿ ಭಾರತ ಉಗಾಂಡಾಗೆ 2 ಬಗೆಯ ಹೈಬ್ರಿಡ್ ಬೀಜಗಳನ್ನ ಕಳುಹಿಸಿಕೊಟ್ಟಿತ್ತು. ಇದೀಗ ಫಸಲು ಬರಲು ಆರಂಭವಾಗಿದ್ದು, ಫಸಲು ಪರೀಕ್ಷೆ ಬಳಿಕ ಈ ಬೀಜಗಳು ಬೇಸಾಯಕ್ಕೆ ಬಳಕೆಯಾಗಲಿವೆ ಅಂತಾ ಷಡಕ್ಷರಿ ಮಾಹಿತಿ ನೀಡಿದ್ದಾರೆ.