ಅಮೆರಿಕ ಡಾಲರ್ ಕುಸಿತ ಹಾಗೂ ದೊಡ್ಡ ಮಟ್ಟದಲ್ಲಿ ವಿದೇಶೀ ಹಣದ ಒಳಹರಿವಿನ ನಡುವೆಯೂ 2020ರ ವರ್ಷದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ ಕರೆನ್ಸಿ ಆಗಿ ಭಾರತೀಯ ರೂಪಾಯಿ ಹೊರಹೊಮ್ಮಿದೆ.
ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಭಾರತೀಯ ರೂಪಾಯಿಯು ಅಮೆರಿಕದ ಡಾಲರ್ ವಿರುದ್ಧದ ತನ್ನ ಮೌಲ್ಯದಲ್ಲಿ 3.28% ಇಳಿಕೆ ಕಂಡಿದೆ. ಸಮಾಧಾನದ ವಿಚಾರವೆಂದರೆ, ಇದೇ ಅವಧಿಯಲ್ಲಿ ಪಾಕಿಸ್ತಾನದ ರೂಪಾಯಿ ನಮ್ಮದರದ್ದಕ್ಕಿಂತ ಸ್ವಲ್ಪ ಕೆಟ್ಟದಾಗಿ, ಅಂದರೆ 3.53%ರಷ್ಟು, ಕುಸಿತ ಕಂಡಿರುವುದು.
ಮಾರುಕಟ್ಟೆಯಲ್ಲಿ ಆರ್‌ಬಿಐನ ವಿಪರೀತ ಮೂಗು ತೂರಿಸುವಿಕೆಯ ಕಾರಣದಿಂದಾಗಿ ರೂಪಾಯಿ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ ಎಂದು ಮಾರುಕಟ್ಟೆ ತಜ್ಞ ಶ್ರೀರಾಮ್ ಐಯ್ಯರ್ ಹೇಳುತ್ತಾರೆ. ಆರ್‌ಬಿಐ ಮಾಹಿತಿ ಪ್ರಕಾರ, ದೇಶದ ವಿದೇಶೀ ವಿನಿಮಯವು $579.35 ಶತಕೋಟಿಯ ದಾಖಲೆ ಮಟ್ಟದಲ್ಲಿದೆ.