ಭಾರತೀಯ ರೈಲ್ವೆ ಇಲಾಖೆ ಏಪ್ರಿಲ್ 10 ರಿಂದ ನಾಲ್ಕು ಶತಾಬ್ದಿ ಹಾಗೂ 1 ಡುರೊಂಟೊ ಸ್ಪೆಶಲ್ ರೈಲನ್ನ ಹಳಿಗಿಳಿಸಲು ನಿರ್ಧರಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, ನಾಲ್ಕು ಶತಾಬ್ದಿ ಸ್ಪೆಶಲ್ ಹಾಗೂ ಡುರೊಂಟೊ ಸ್ಪೆಶಲ್ ರೈಲು ಭಾರತೀಯ ರೈಲ್ವೆಯನ್ನ ಸೇರಲಿವೆ. ಈ ಹೊಸ ಸೇವೆಯು ಏಪ್ರಿಲ್ 10 ರಿಂದ 15ರ ನಡುವೆ ಆರಂಭವಾಗಲಿದೆ ಎಂದು ಬರೆದಿದ್ದಾರೆ.
ದೆಹಲಿ – ಅಮೃತಸರ (ಪ್ರತಿದಿನ)
ದೆಹಲಿ – ಅಮೃತಸರ (ಪ್ರತಿವಾರ)
ಚಂಡೀಗಢ – ದೆಹಲಿ (ವಾರದಲ್ಲಿ 6 ದಿನ)
ದೆಹಲಿ – ದೌರೈ (ಪ್ರತಿದಿನ)
ಡುರೊಂಟೋ ಸ್ಪೆಶಲ್ ರೈಲಿನ ಮಾರ್ಗ ಹಾಗೂ ವೇಳಾಪಟ್ಟಿ
ಸರೈ ರೋಹಿಲ್ಲ, ದೆಹಲಿ – ಜಮ್ಮು ತವಿ ( ವಾರದಲ್ಲಿ ಮೂರು ದಿನ)
ಏಪ್ರಿಲ್ ಮೂರರಂದು ರೈಲ್ವೆ ಇಲಾಖೆಯ ಸಿಬ್ಬಂದಿಯ ಕಾರ್ಯವೈಖರಿಯನ್ನ ಮೆಚ್ಚಿದ್ದ ಗೋಯಲ್, ಕೋವಿಡ್ ವರ್ಷದಲ್ಲಿ ಅದ್ಭುತ ಸೇವೆ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು.
ಜಗತ್ತೇ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ರೈಲ್ವೆ ನೌಕರರು ಒಂದು ದಿನವೂ ರಜೆ ಪಡೆಯಲಿಲ್ಲ. ದೇಶದ ಆರ್ಥಿಕತೆ ಚಕ್ರ ಚಲಿಸುವಂತೆ ಮಾಡುವಲ್ಲಿ ರೈಲ್ವೆ ಇಲಾಖೆಯ ಪಾತ್ರ ಮಹತ್ವದ್ದಾಗಿತ್ತು. ನಿಮ್ಮೆಲ್ಲರ ಇಚ್ಛಾಶಕ್ತಿಯಿಂದಾಗಿ ಇಂತಹ ಬಿಕ್ಕಟ್ಟಿನ ಸಂದರ್ಭವನ್ನೂ ನಾವು ಅವಕಾಶವನ್ನಾಗಿ ಪರಿವರ್ತಿಸಿದ್ದೇವೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ರು.