alex Certify ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಜೂ.21ರಿಂದ 50 ವಿಶೇಷ ರೈಲುಗಳ ಸೇವೆ ಪುನಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಜೂ.21ರಿಂದ 50 ವಿಶೇಷ ರೈಲುಗಳ ಸೇವೆ ಪುನಾರಂಭ

ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ರೈಲುಗಳ ಪೈಕಿ 50 ವಿಶೇಷ ರೈಲುಗಳನ್ನ ಸಾರ್ವಜನಿಕ ಸೇವೆಗಾಗಿ ಪುನಾರಂಭಿಸಲು ರೈಲ್ವೆ ಸಚಿವಾಲಯ ಮುಂದಾಗಿದೆ. ಪ್ರಯಾಣಿಕರ ಬೇಡಿಕೆ ಹಾಗೂ ಕೊರೊನಾ ಪರಿಸ್ಥಿತಿಯನ್ನ ನಿಭಾಯಿಸುವ ಸಲುವಾಗಿ ಜೂನ್​ 21ರಿಂದಲೇ ಈ ಸೇವೆ ಆರಂಭವಾಗಲಿದೆ.

ಉತ್ತರ ಪ್ರದೇಶದ ಗೋರಖ್​ಪುರದಿಂದ ಮಹಾರಾಷ್ಟ್ರದ ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಜೂನ್​​ 25ರಿಂದ ಬೇಸಿಗೆ ವಿಶೇಷ ರೈಲು ಸೇವೆ ಕೂಡ ಆರಂಭವಾಗಲಿದೆ. ಬೇಡಿಕೆಯನ್ನ ಗಮನದಲ್ಲಿರಿಸಿ ಕ್ರಮೇಣವಾಗಿ ರೈಲು ಸೇವೆಗಳ ಸಂಖ್ಯೆಯನ್ನ ಹೆಚ್ಚಳವಾಗಲಿದೆ.

ಜೂನ್​ ಮೊದಲ ವಾರದಿಂದ ಪ್ರತಿದಿನ ಕಾರ್ಯ ನಿರ್ವಹಿಸುತ್ತಿದ್ದ 800 ಮೇಲ್​ / ಎಕ್ಸ್​ಪ್ರೆಸ್​​ ರೈಲುಗಳಿಂದ ಶುಕ್ರವಾರದ ವೇಳೆ 983 ಮೇಲ್​ / ಎಕ್ಸ್​​ಪ್ರೆಸ್​ಗೆ ಏರಿಕೆ ಕಂಡಿದೆ. ಪ್ರಯಾಣಿಕರ ಬೇಡಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ರೈಲು ಸೇವೆಗಳ ಸಂಖ್ಯೆಯನ್ನ ಕ್ರಮೇಣವಾಗಿ ಏರಿಕೆ ಮಾಡಲಾಗುತ್ತಿದೆ.

ಜೂನ್​ 1 ರಿಂದ 18ರ ಒಳಗಾಗಿ 660 ಹೆಚ್ಚುವರಿ ಮೇಲ್​ /ಎಕ್ಸ್​ಪ್ರೆಸ್​​ ರೈಲು ಸೇವೆಗಳನ್ನ ವಲಯವಾರು ರೈಲ್ವೆಗಳಲ್ಲಿ ಆರಂಭಿಸಲಾಗಿದೆ.

ಜೂನ್​ 21ರಿಂದ ಪುನಾರಂಭಿಸಲಿರುವ ರೈಲುಗಳಲ್ಲಿ ದೆಹಲಿ – ಕಲ್ಕಾ ಶತಾಬ್ದಿ ಎಕ್ಸ್​ಪ್ರೆಸ್, ದೆಹಲಿ – ಡೆಹ್ರಾಡೂನ್​ ಶತಾಬ್ದಿ ಎಕ್ಸ್​ಪ್ರೆಸ್​, ದೆಹಲಿ -ಅಮೃತ್​ಸರ್​ ಶತಾಬ್ದಿ ಎಕ್ಸ್​ಪ್ರೆಸ್​, ದೆಹಲಿ ಜಂಕ್ಷನ್​ – ಕೋಟ್ವಾರಾ ಶತಾಬ್ದಿ ಎಕ್ಸ್​ಪ್ರೆಸ್, ಚಂಡೀಗಢ – ದೆಹಲಿ ಶತಾಬ್ದಿ ಎಕ್ಸ್​ಪ್ರೆಸ್​, ಕಲ್ಕಾ – ಶಿಮ್ಲಾ ಎಕ್ಸ್​ಪ್ರೆಸ್​, ಬಿಲಾಸ್​ಪುರ ಜಂಕ್ಷನ್​ – ದೆಹಲಿ ಎಕ್ಸ್​ಪ್ರೆಸ್, ಲಕ್ನೋ – ಪ್ರಯಾಗ್​ರಾಜ್​​ ಸಂಗಮ್​ ಎಕ್ಸ್​ಪ್ರೆಸ್​, ಛಪ್ರಾ – ಲಕ್ನೋ ಜಂಕ್ಷನ್​ ಎಕ್ಸ್​​ಪ್ರೆಸ್​ ಹಾಗೂ ಫಾರೂಕಾಬಾದ್​ – ಛಪ್ರಾ ಎಕ್ಸ್​ಪ್ರೆಸ್​​ಗಳು ಸೇರಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...