ಕೇಂದ್ರ ಸರ್ಕಾರವು ಅನ್ ಲಾಕ್ 5.0 ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ಭಾರತೀಯ ರೈಲ್ವೆ ಇಲಾಖೆಯು ಹಿಂದಿನಂತೆ ಕಾರ್ಯ ನಿರ್ವಹಿಸಲು ತಯಾರಿ ಮಾಡಿಕೊಳ್ಳುತ್ತಿದ್ದು, ಪ್ರಮುಖವಾಗಿ ಕಾಯ್ದಿರಿಸಿದ ಆಸನಗಳ ಎರಡನೇ ಪಟ್ಟಿಯನ್ನು ರೈಲು ಹೊರಡುವ ಅರ್ಧ ಗಂಟೆ ಮೊದಲೇ ಪ್ರಕಟಿಸಲು ನಿರ್ಧರಿಸಿದೆ.
ಪ್ರಯಾಣಿಕರ ಒತ್ತಾಯದ ಮೇರೆಗೆ ವಲಯ ರೈಲ್ವೆ ಅಧಿಕಾರಿಗಳು ಸಲ್ಲಿಸಿದ್ದ ಈ ಪ್ರಸ್ತಾವನೆಗೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ರೈಲು ಹೊರಡುವ ಅರ್ಧ ಗಂಟೆಗೆ ಮುನ್ನವೇ ಕಾಯ್ದಿರಿಸಿದ ಆಸನಗಳ ಎರಡನೇ ಪಟ್ಟಿ ಹೊರಡಿಸುವಂತೆ ಸೂಚಿಸಿದೆ.
ಆನ್ ಲೈನ್ ಮಾತ್ರವಲ್ಲದೆ, ಸ್ಥಳದಲ್ಲಿ ಪ್ರಯಾಣಿಕರೇ ಕಾಯ್ದಿರಿಸುವ ವ್ಯವಸ್ಥೆ (ಪಿ ಆರ್ ಎಸ್) ಸಹ ಇರಲಿದ್ದು, ಟಿಕೆಟ್ ಕೇಂದ್ರದಲ್ಲಿಯೂ ಕಾಯ್ದಿರಿಸುವ ವ್ಯವಸ್ಥೆ ಇರಲಿದೆ.
ಅ.10 ರಿಂದ ಈ ವ್ಯವಸ್ಥೆಗಳು ಜಾರಿಗೆ ಬರಲಿದ್ದು, ಅಗತ್ಯ ಸಾಫ್ಟವೇರ್ ಅಭಿವೃದ್ಧಿಪಡಿಸಿ ಅಳವಡಿಸಲು ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ (ಸಿ ಆರ್ ಐ ಎಸ್) ಮಾರ್ಗಸೂಚಿ ಬಿಡುಗಡೆ ಮಾಡಿದೆ.