alex Certify ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಭಾರೀ ಬೇಡಿಕೆ ಇರುವ ಮಾರ್ಗಗಳಲ್ಲಿ ಕ್ಲೋನ್ ರೈಲುಗಳನ್ನು ಓಡಿಸುವ ತನ್ನ ಸೇವೆಯನ್ನು ಇನ್ನಷ್ಟು ದಿನಗಳ ಮಟ್ಟಿಗೆ ಮುಂದುವರೆಸಲು ಭಾರತೀಯ ರೈಲ್ವೇ ನಿರ್ಧರಿಸಿದೆ.

ಯಾವ ಮಾರ್ಗಗಳಲ್ಲಿ ವೇಟಿಂಗ್ ಲಿಸ್ಟ್‌ ಟಿಕೆಟ್‌ಗಳು ಸಾಮರ್ಥ್ಯದ 150 ಪ್ರತಿಶತದಷ್ಟು ಇರುತ್ತವೋ, ಆ ಮಾರ್ಗಗಳಲ್ಲಿ ಈ ತದ್ರೂಪಿ ರೈಲುಗಳು (ಕ್ಲೋನ್ ರೈಲುಗಳು) ಸೆಪ್ಟೆಂಬರ್‌ 21ರಿಂದ ಓಡುತ್ತಾ ಬಂದಿವೆ. ಒಟ್ಟಾರೆ 40 ಜೋಡಿ ಕ್ಲೋನ್ ರೈಲುಗಳು ದೇಶದ ಅತ್ಯಂತ ಬೇಡಿಕೆ ಇರುವ ಮಾರ್ಗಗಳಲ್ಲಿ ಸಂಚರಿಸುತ್ತಾ ಬಂದಿವೆ.

ಇದಕ್ಕೂ ಮುನ್ನ 310 ವಿಶೇಷ ರೈಲುಗಳು ಸೇವೆಯಲ್ಲಿ ಇದ್ದವು. ಈ ವಿಶೇಷ ರೈಲುಗಳು ಸಂಚಾರ ಆರಂಭಿಸುವ 1-2 ಗಂಟೆಗಳ ಮುಂಚೆ ತಮ್ಮ ಸಂಚಾರ ಆರಂಭಿಸುತ್ತಿದ್ದವು. ಆದರೆ ಪ್ರಯಾಣದ ಅವಧಿ ಹಾಗೂ ನಿಲುಗಡೆಗಳನ್ನು ಕೇವಲ ಕಾರ್ಯಾಚರಣೆ ಉದ್ದೇಶಗಳಿಗೆ ಮಾತ್ರವೇ ಸೀಮಿತಗೊಳಿಸಲಾಗಿತ್ತು.

ನೈಋತ್ಯ (ದಕ್ಷಿಣ ಪಶ್ಚಿಮ) ವಲಯದಿಂದ ಮೂರು ಜೋಡಿ ರೈಲುಗಳು ಗೋವಾ, ದೆಹಲಿ ಹಾಗೂ ಬಿಹಾರದೊಂದಿಗೆ ರಾಜ್ಯ ರಾಜಧಾನಿಯನ್ನು ಸಂಪರ್ಕಿಸುತ್ತಾ ಬಂದಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...