ಇಂಡಿಯನ್ ಆಯಿಲ್ 4 ವಿಶೇಷ ಸೌಲಭ್ಯಗಳನ್ನು ಪ್ರಾರಂಭಿಸಿದೆ. ಇದು ಗ್ರಾಹಕರ ಕೆಲಸವನ್ನು ಸುಲಭಗೊಳಿಸಿದೆ. ಇಂಡೇನ್‌ನ ಗ್ರಾಹಕರಾಗಿದ್ದರೆ ಸುಲಭವಾಗಿ ಅದರ ಲಾಭವನ್ನು ಪಡೆಯಬಹುದು. ಇಂಡಿಯನ್ ಆಯಿಲ್ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.
ಇಂಡಿಯನ್ ಆಯಿಲ್, ಟ್ವೀಟ್ ಮಾಡಿದ್ದು, ಈ ವರ್ಷ ನಾವು 4 ಹೊಸ ಸೇವೆಗಳನ್ನು ಪ್ರಾರಂಭಿಸಿದ್ದೇವೆ. ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ಎಲ್ಲಾ ಸೇವೆಗಳನ್ನು ಪ್ರಾರಂಭಿಸಲಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿ ಗ್ರಾಹಕರಿಗೆ ಹೆಚ್ಚು ಉರಿಯಬಲ್ಲ ಸಿಲಿಂಡರ್ ಸಿಗಲಿದೆ. ಒಳ್ಳೆ ಕ್ವಾಲಿಟಿಯ ಸಿಲಿಂಡರ್ ಜೊತೆ ಅಡುಗೆ ಬೇಗ ಬೇಯಲು ಸಹಾಯವಾಗಲಿದೆ. ಇದ್ರಿಂದ ಸಮಯ ಉಳಿಯಲಿದೆ. ಇದ್ರಿಂದ ಆಹಾರದ ಗುಣಮಟ್ಟ ಉತ್ತಮವಾಗಿರಲಿದೆ.
ಮನೆಯಲ್ಲೇ ಕೋವಿಡ್ ಪರೀಕ್ಷೆ ಕಿಟ್ ಬಳಕೆಗೆ ಐಸಿಎಂಆರ್ ಅನುಮೋದನೆ
ಕೊರೊನಾ ಬಿಕ್ಕಟ್ಟಿನ ಮಧ್ಯೆ ಗ್ರಾಹಕರು ಮಿಸ್ಡ್ ಕಾಲ್ ನೀಡುವ ಮೂಲಕ ಸಿಲಿಂಡರ್ ಬುಕ್ ಮಾಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಹಣ ಖರ್ಚು ಮಾಡದೆ ನೀವು ಮಿಸ್ಡ್ ಕಾಲ್ ನೀಡಬಹುದು. 8454955555 ನಂಬರ್ ಗೆ ಮಿಸ್ಡ್ ಕಾಲ್ ಮಾಡಿದ್ರೆ ನಿಮ್ಮ ಸಿಲಿಂಡರ್ ಬುಕ್ ಆಗಲಿದೆ.
ಇದಲ್ಲದೆ ಕಂಪನಿಯು ಗ್ರಾಹಕರಿಗೆ ಕಾಂಬೊ ಸಿಲಿಂಡರ್‌ಗಳನ್ನು ಸಹ ನೀಡಿದೆ. ಅಂದರೆ 14.4 ಕೆಜಿ ಸಿಲಿಂಡರ್ ಜೊತೆ 5 ಕೆಜಿ ಸಿಲಿಂಡರ್ ನಿಮಗೆ ಸಿಗಲಿದೆ.
ಒಂಟಿಯಾಗಿರುವ ಜನರಿಗೆ ಕಂಪನಿ 5 ಕೆ.ಜಿ. ಸಣ್ಣ ಸಿಲಿಂಡರ್ ನೀಡುವ ಸೌಲಭ್ಯ ಜಾರಿಗೆ ತಂದಿದೆ. 5 ಕೆಜಿ ಸಿಲಿಂಡರನ್ನು ಇಂಡೇನ್‌ನ ಏಜೆನ್ಸಿ ಅಥವಾ ಕಂಪನಿಯ ಪೆಟ್ರೋಲ್ ಪಂಪ್‌ನಿಂದ ಖರೀದಿಸಬಹುದು.