
ನವದೆಹಲಿ: ಮಾರ್ಚ್ 1 ರಿಂದ ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳು ಬರುವುದಿಲ್ಲ.
ಬ್ಯಾಂಕಿನ ಕೌಂಟರ್ ಗಳಲ್ಲಿ 2000 ರೂ ನೋಟುಗಳನ್ನು ಪಡೆಯಬಹುದಾಗಿದೆ. ಅಂದ ಹಾಗೆ, ಎಟಿಎಂಗಳಲ್ಲಿ ಹಣ ಪಡೆಯುವರು 2000 ರೂಪಾಯಿ ನೋಟುಗಳನ್ನು ಚಿಲ್ಲರೆಗೆ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಬ್ಯಾಂಕ್ ಶಾಖೆಗಳಿಗೆ ಬರುತ್ತಾರೆ. ಅದನ್ನು ತಪ್ಪಿಸಲು ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ 2000 ರೂ. ನೋಟ್ ಹಾಕುವುದಿಲ್ಲ. ಬ್ಯಾಂಕ್ ಶಾಖೆಯ ಕೌಂಟರ್ಗಳಲ್ಲಿ 2000 ನೋಟುಗಳನ್ನು ಪಡೆಯಬಹುದು. ಆದರೆ, ಎಟಿಎಂಗಳಲ್ಲಿ ಮಾತ್ರ 2000 ನೋಟು ಹಾಕುವುದಿಲ್ಲವೆಂದು ಹೇಳಲಾಗಿದೆ.