ನವದೆಹಲಿ: ಗೂಗಲ್ ಗೆ ಸೆಡ್ಡು ಹೊಡೆದಿರುವ ಕೇಂದ್ರ ಸರ್ಕಾರ ದೇಶಿ ಮೊಬೈಲ್ ಸೇವಾ ಆಪ್ ಸ್ಟೋರ್ ಆಪ್ ಬಿಡುಗಡೆ ಮಾಡಿದೆ.
ಗೂಗಲ್, ಆಪಲ್ ಮೊದಲಾದ ಕಂಪನಿಗಳ ಏಕಸ್ವಾಮ್ಯ, ಸರ್ವಾಧಿಪತ್ಯಕ್ಕೆ ಟಾಂಗ್ ಕೊಡಲು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮೊಬೈಲ್ ಸೇವಾ ಆಪ್ ಸ್ಟೋರ್ ಆಪ್ ಅನ್ನು ಕೇಂದ್ರ ಸರ್ಕಾರ ಬಿಡುಡಗೆ ಮಾಡಿದೆ. ರಾಜ್ಯಸಭೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಈ ಬಗ್ಗೆ ಮಾತನಾಡಿ, ನೂತನ ಮೊಬೈಲ್ ಸೇವಾ ಆಪ್ ಸ್ಟೋರ್ ಆಪ್ ನಿಂದ ಗೂಗಲ್, ಪ್ಲೇ ಸ್ಟೋರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದ್ದಾರೆ.