alex Certify Good News: ಮೇ 1 ರಿಂದ ದೇಶದಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಮೇ 1 ರಿಂದ ದೇಶದಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಲಭ್ಯ

ಭಾರತಕ್ಕೆ ಮೊದಲ ಬ್ಯಾಚ್​ನ ಸ್ಪುಟ್ನಿಕ್​ ವಿ ಲಸಿಕೆಗಳು ಮೇ 1ರಂದು ತಲುಪಲಿವೆ ಎಂದು ರಷ್ಯಾ ನೇರ ಹೂಡಿಕೆ ಬಂಡವಾಳದ ಮುಖ್ಯಸ್ಥ ಕಿರಿಲ್​ ಡಿಮಿಟ್ರಿವ್​ ಹೇಳಿದ್ದಾರೆ. ಆದರೆ ಮೊದಲ ಬ್ಯಾಚ್​ನಲ್ಲಿ ಎಷ್ಟು ಸ್ಪುಟ್ನಿಕ್​ ವಿ ಲಸಿಕೆಗಳು ಭಾರತಕ್ಕೆ ಬರಲಿವೆ ಅನ್ನೋದ್ರ ಬಗ್ಗೆ ಕಿರಿಲ್​ ಯಾವುದೇ ಮಾಹಿತಿ ನೀಡಿಲ್ಲ.

ಸ್ಪುಟ್ನಿಕ್ ವಿ ಲಸಿಕೆ ತಯಾರಾಗಿದ್ದೆಲ್ಲಿ..?

ಗ್ಯಾಮೆಲಿಯಾ ನ್ಯಾಷನಲ್​ ರಿಸರ್ಚ್​ ಸೆಂಟರ್​ ಆಫ್​ ಎಪಿಡೆಮಿಯಾಲಜಿ ಹಾಗೂ ಮೈಕ್ರೋಬಯಾಲಜಿ ಮತ್ತು ಆರ್​ಡಿ ಐಎಫ್​ ಜಂಟಿಯಾಗಿ ಈ ಲಸಿಕೆಯನ್ನ ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಈ ಲಸಿಕೆಯನ್ನ ಹೈದರಾಬಾದ್​ ಮೂಲದ ಡಾ. ರೆಡ್ಡೀಸ್​ ಔಷಧಾಲಯದ ಮಾರಾಟ ಮಾಡ್ತಿದೆ. ಭಾರತದಲ್ಲಿ ಕ್ಲಿನಿಕಲ್​ ಪ್ರಯೋಗಳನ್ನ ನಡೆಸುವ ಸಲುವಾಗಿ ಸೆಪ್ಟೆಂಬರ್​​ 2020ರಲ್ಲಿ ಡಾ. ರೆಡ್ಡೀಸ್​ ಜೊತೆ ಆರ್​ಡಿಎಫ್​ ಒಡಂಬಡಿಕೆ ಮಾಡಿಕೊಂಡಿತು. ಇದಾದ ಬಳಿಕ ಕೊರೊನಾ ಲಸಿಕೆಯ ತುರ್ತು ಬಳಕೆಗಾಗಿ ರೆಡ್ಡೀಸ್​ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು.

ಸ್ಪುಟ್ನಿಕ್​ ವಿ ಲಸಿಕೆಯ ಬೆಲೆ ಎಷ್ಟು..?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಡೋಸ್​ ಸ್ಪುಟ್ನಿಕ್​ ವಿ ಲಸಿಕೆಯ ಬೆಲೆ 10 ಡಾಲರ್​ಗಿಂತ ಕಡಿಮೆ ಇದೆ. ಆದರೆ ಭಾರತ ಇಲ್ಲಿಯವರೆಗೆ ಸ್ಪುಟ್ನಿಕ್​ ವಿಗೆ ಯಾವುದೇ ದರ ನಿಗದಿ ಮಾಡಿಲ್ಲ.

ದೇಶದ ಜನತೆಗೆ ಶಾಕಿಂಗ್ ನ್ಯೂಸ್: ಕೊರೋನಾ ನಕಲಿ ಔಷಧಿ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ

ಸ್ಪುಟ್ನಿಕ್​ ವಿ ಡೋಸೇಜ್​

ಸ್ಪುಟ್ನಿಕ್​ ವಿ 2 ಡೋಸ್​ಗಳಲ್ಲಿ ನೀಡುವ ಲಸಿಕೆಯಾಗಿದೆ. ಮೊದಲ ಡೋಸ್​ ಹಾಗೂ ಎರಡನೇ ಡೋಸ್​ ನಡುವೆ 21 ದಿನಗಳ ಅಂತರ ಇರಬೇಕು. 28ನೇ ದಿನದಿಂದ 42 ದಿನಗಳ ಒಳಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ.

ಸ್ಪುಟ್ನಿಕ್​ ವಿ ಸಾಮರ್ಥ್ಯ

ಸ್ಪುಟ್ನಿಕ್​ ವಿ ತನ್ನ ಪ್ರಯೋಗ ಪರೀಕ್ಷೆಗಳ ಮೂಲಕ 91.6 ಪ್ರತಿತ ಪರಿಣಾಮಕಾತ್ವವನ್ನ ತೋರಿಸಿದೆ. ಇದೇ ರೀತಿ ಫೈಜರ್​, ಮೊಡೆರ್ನಾ ಕೂಡ 90 ಪ್ರತಿಶತಕ್ಕೂ ಅಧಿಕ ಪರಿಣಾಮಕಾರತ್ವ ತೋರಿಸಿದೆ. ದೇಶದಲ್ಲಿ ಸದ್ಯ ಬಳಕೆಯಲ್ಲಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ 81 ಪ್ರತಿಶತ ಪರಿಣಾಮಕಾರತ್ವ ತೋರಿಸಿದೆ.

ಸ್ಪುಟ್ನಿಕ್​ ವಿ ಸೈಡ್​ ಎಫೆಕ್ಟ್ :

ಸ್ಪುಟ್ನಿಕ್ ವಿ ಲಸಿಕೆ ಬಳಿಕ ವ್ಯಕ್ತಿ ಗಂಭೀರ ಸಮಸ್ಯೆ ಉಂಟಾಗಿರೋದ್ರ ಬಗ್ಗೆ ವರದಿಯಾಗಿಲ್ಲ. ಸ್ಪುಟ್ನಿಕ್​ ವಿ ಲಸಿಕೆ ಪ್ರಯೋಗದ ವೇಳೆಯಲ್ಲಿ ನಾಲ್ಕು ಸಾವುಗಳು ವರದಿಯಾಗಿವೆ. ಇದಕ್ಕೆ ಸ್ಪುಟ್ನಿಕ್ ವಿ ನೇರ ಕಾರಣ ಎನ್ನಲಾಗೋದಿಲ್ಲ. ನಾಲ್ಕು ಸಾವುಗಳಲ್ಲಿ ಯಾವುದೂ ಲಸಿಕೆಗೆ ಸಂಬಂಧಿಸಿದ್ದಲ್ಲ ಎಂದು ವರದಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...