ಮುಂಬೈ: ವಾಹನ, ಸಾರಿಗೆ ನಿಯಮದಲ್ಲಿ ಅನೇಕ ಬದಲಾವಣೆ ತಂದಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಮತ್ತೊಂದು ಹೊಸ ನೀತಿ ಜಾರಿಗೆ ತರಲಾಗುವುದು
ಇನ್ನು ಆರು ತಿಂಗಳಲ್ಲಿ ಜೈವಿಕ ಇಂಧನ ವಾಹನ ತಯಾರಿಕೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
6 ತಿಂಗಳಲ್ಲಿ ಜೈವಿಕ ಇಂಧನ ಬಳಕೆ ಮಾಡಿ ಚಲಿಸುವ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದನ್ನು ಆಟೋಮೊಬೈಲ್ ಕಂಪನಿಗಳಿಗೆ ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಹಕರಿಗೆ ಕಡಿಮೆ ಹೊರೆಯಾಗುವ ಜೈವಿಕ ಇಂಧನ ಬಳಕೆ ವಾಹನಗಳನ್ನು ಕಡ್ಡಾಯವಾಗಿಸಲು ಕ್ರಮಕೈಗೊಳ್ಳಲಾಗುತ್ತದೆ. ಜೈವಿಕ ಇಂಧನದ ಬೆಲೆ ಕಡಿಮೆ ಇದೆ. ಅದರಿಂದ ಮಾಲಿನ್ಯವೂ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಲ್ಲದೆ, ವಿದೇಶಿ ವಿನಿಮಯ ಉಳಿತಾಯಕ್ಕೂ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಇನ್ನು ಆರು ತಿಂಗಳೊಳಗೆ ಜೈವಿಕ ಇಂಧನ ಬಳಕೆ ಮಾಡುವ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದನ್ನು ಆಟೋಮೊಬೈಲ್ ಕಂಪನಿಗಳಿಗೆ ಕಡ್ಡಾಯಗೊಳಿಸುವುದಾಗಿ ತಿಳಿಸಿದ್ದಾರೆ.