ಪೆಟ್ರೋಲ್/ಡೀಸೆಲ್ ಬೆಲೆಗಳ ಏರಿಕೆಯಿಂದಾಗಿ ರೋಸಿ ಹೋಗಿರುವ ದೇಶವಾಸಿಗಳಿಗೆ ರಿಲೀಫ್ ಕೊಡಲೆಂದು ಪರ್ಯಾಯ ಇಂಧನವನ್ನಾಗಿ ಎಥನಾಲ್ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಮುಂದಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಬ್ರಿಕ್ಸ್ ನೆಟ್ವರ್ಕ್ ವಿವಿ ಆಯೋಜನೆ ಮಾಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಬ್ರೆಜಿಲ್, ಕೆನಡಾ ಹಾಗೂ ಅಮೆರಿಕಾಗಳಲ್ಲಿ ಫ್ಲೆಕ್ಸ್-ಇಂಧನದ ಇಂಜಿನ್‌ಗಳನ್ನು ಆಟೋಮೊಬೈಲ್ ತಯಾರಕರು ಉತ್ಪಾದಿಸುತ್ತಿದ್ದು, ತಮ್ಮ ಗ್ರಾಹಕರಿಗೆ 100 ಪ್ರತಿಶತ ಪೆಟ್ರೋಲ್ ಅಥವಾ 100 ಪ್ರತಿಶತ ಜೈವಿಕ-ಎಥನಾಲ್ ಬಳಸುವ ಆಯ್ಕೆಯನ್ನು ಕೊಡುತ್ತಿವೆ ಎಂದಿದ್ದಾರೆ.
’ಪಾಕೆಟ್ ವೆಂಟಿಲೇಟರ್’ ಅಭಿವೃದ್ಧಿಪಡಿಸಿದ ಕೋಲ್ಕತ್ತಾ ವಿಜ್ಞಾನಿ
ದೇಶದ ಅನೇಕ ಕಡೆಗಳಲ್ಲಿ ಇಂಧನ ಬೆಲೆಯು 100 ರೂ/ಲೀ ಗಿಂತ ಹೆಚ್ಚಾಗಿದೆ. ಈ ವೇಳೆ ದೇಶವಾಸಿಗಳು ಬಹಳ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣದಿಂದಾಗಿ, ಕೈಗೆಟುಕುವ ದರದಲ್ಲಿ ಸಿಗುವ ಎಥನಾಲ್ ಬಳಕೆಯನ್ನು ಉತ್ತೇಜಿಸಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.
ಎಥನಾಲ್ ಬೆಲೆಯು 60-62 ರೂ./ಲೀ ನಂತೆ ಇರಲಿದೆ ಎಂದು ಗಡ್ಕರಿ ಇದೇ ವೇಳೆ ತಿಳಿಸಿದ್ದು, “ಕ್ಯಾಲೋರಿಕ್ ಮೌಲ್ಯವನ್ನು ಪರಿಗಣಿಸಿದರೆ, 750-800 ಮಿಲೀ ಪೆಟ್ರೋಲ್ ಒಂದು ಲೀಟರ್ ಎಥನಾಲ್‌ಗೆ ಸಮ. ಹೀಗಿದ್ದರೂ ಸಹ ಪ್ರತಿ ಲೀಟರ್‌ಗೆ 20 ರೂಪಾಯಿಯಷ್ಟು ಉಳಿಸಿಕೊಳ್ಳಬಹುದು” ಎಂದಿದ್ದಾರೆ.