ನವದೆಹಲಿ: ಚೀನಾಗೆ ಸರಿಯಾಗೇ ಬಿಸಿ ಮುಟ್ಟಿಸುತ್ತಿರುವ ಕೇಂದ್ರ ಸರ್ಕಾರ 59 ಆಪ್ ಗಳನ್ನು ಬ್ಯಾನ್ ಮಾಡಿದೆ. ಇದರ ಮುಂದುವರೆದ ಭಾಗವಾಗಿ ಹೆದ್ದಾರಿ ಕಾಮಗಾರಿಗಳಿಂದ ಚೀನಾ ಕಂಪನಿಗಳನ್ನು ಹೊರಗಿಡಲಾಗಿದೆ. ಅದೇ ರೀತಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಚೀನಾ ಕಂಪನಿಗಳ ಹೂಡಿಕೆಗೆ ಬ್ರೇಕ್ ಹಾಕಲಾಗಿದೆ.
ಲಡಾಖ್ ಗಡಿ ಸಂಘರ್ಷದ ಬಳಿಕ ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ, 59 ಆಪ್ ಬ್ಯಾನ್ ಮಾಡಿ ಚೀನಾಗೆ ಬಿಸಿ ಮುಟ್ಟಿಸಿದ್ದು ಈಗ ಹೆದ್ದಾರಿ ಕಾಮಗಾರಿಗಳಿಂದ ಚೀನಾ ಕಂಪನಿಗಳನ್ನು ಹೊರಗಿಡಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಸಣ್ಣ ಮತ್ತು ಮಧ್ಯಮ, ಅತಿ ಸಣ್ಣ ಕೈಗಾರಿಕೆ ಸೇರಿದಂತೆ ಇತರೆ ವಲಯದಲ್ಲಿ ಚೀನಾ ಕಂಪನಿಗಳು ಹೂಡಿಕೆ ಮಾಡಲು ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕುರಿತು ಮಾತನಾಡಿ, ಚೀನಾ ಸಂಬಂಧ ಹೊಂದಿರುವ ಯಾವ ಕಂಪನಿಗೂ ರಸ್ತೆ ಕಾಮಗಾರಿ ಗುತ್ತಿಗೆ ನೀಡುವುದಿಲ್ಲ. ಈಗಾಗಲೇ ಚೀನಾ ಕಂಪನಿಗಳು ಗುತ್ತಿಗೆ ಪಡೆದಿದ್ದರೆ ರದ್ದು ಮಾಡಿ ಹೊಸದಾಗಿ ಬಿಡ್ಡಿಂಗ್ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಬಿಎಸ್ಎನ್ಎಲ್, ಎಂಟಿಎನ್ಎಲ್ ಗಳು ಚೀನಾ ಕಂಪನಿಗಳೊಂದಿಗಿನ 4 ಜಿ ನೆಟ್ ವರ್ಕ್ ಅಭಿವೃದ್ಧಿ ಒಪ್ಪಂದವನ್ನು ರದ್ದು ಮಾಡಿವೆ.