ಮಧ್ಯಮ ಪ್ರಮಾಣದ ನಾಲ್ಕು ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಬ್ಯಾಂಕ್ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಆಫ್ ಇಂಡಿಯಾ (50,000 ನೌಕರರು), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (33,000), ಇಂಡಿಯನ್ ಓವರ್ ಸೀಸ್ ಬ್ಯಾಂಕ್ ( 26,000) ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ (13,000) ವು ಖಾಸಗೀಕರಣದತ್ತ ಮುಖ ಮಾಡಿವೆ.
ಮೋದಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ, ಸಾರ್ವಜನಿಕರೊಂದಿಗೆ ಸಂವಹನಕ್ಕೆ ಕೂ ಆಪ್ ಗೆ ಮೊದಲ ಆದ್ಯತೆ
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಕೇವಲ 13,000 ಸಿಬ್ಬಂದಿ ಇರುವುದರಿಂದ ಖಾಸಗೀಕರಣ ಪ್ರಕ್ರಿಯೆಯು ಬೇಗನೆ ಮುಗಿಯುತ್ತದೆ. ಒಟ್ಟಾರೆ ಈ ನಾಲ್ಕು ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಶುರುವಾಗಲು ಇನ್ನೂ 5-6 ತಿಂಗಳಂತೂ ಬೇಕು.
ಆದರೆ, ಈಗಾಗಲೇ ಮುಷ್ಕರ ಹೂಡಿರುವ ಸಿಬ್ಬಂದಿ, ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ವಿಮೆ ಸೇರಿದಂತೆ ಬೇರೆ ಸಂಸ್ಥೆಗಳಲ್ಲಿ ಹೂಡಿಕೆಯಾಗಿರುವ ಪಾಲು ಮಾರಾಟ ಮಾಡಬಾರದು ಎಂದು ಆಗ್ರಹಿಸಿದ್ದಾರೆ.