ನವದೆಹಲಿ: ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು ಈ ವರ್ಷ 10,000 ಅಂಚೆ ಕಚೇರಿಗಳನ್ನು ತೆರೆಯುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಸಿಐಐ ಸಮ್ಮೇಳನದಲ್ಲಿ ಅಂಚೆ ಇಲಾಖೆ ಕಾರ್ಯದರ್ಶಿ ಅಮನ್ ಶರ್ಮಾ ಮಾತನಾಡಿ, ತಂತ್ರಜ್ಞಾನ ಬಳಸಿ ಅಂಚೆ ಕಚೇರಿಗಳ ಆಧುನೀಕರಣಕ್ಕೆ ಇಲಾಖೆಗೆ 5,200 ಕೋಟಿ ರೂ. ನೀಡಲಾಗಿದೆ. ಇತ್ತೀಚೆಗೆ ಗುಜರಾತ್ ನಲ್ಲಿ ಡ್ರೋನ್ ಗಳ ಮೂಲಕ ವಿತರಣೆ ಪೂರ್ಣಗೊಳಿಸಿದ್ದೇವೆ. 2012 ರಲ್ಲಿ ಪ್ರಾರಂಭಿಸಿದ ಐಟಿ ಯೋಜನೆಯನ್ನು ಮುಂದುವರಿಸಲು ಸರ್ಕಾರ ಹೇಳಿದ್ದು, ಅಂಚೆ ಮತ್ತು ವಿವಿಧ ಸರ್ಕಾರಿ ಸೇವೆಗಳನ್ನು ಶೀಘ್ರದಲ್ಲೇ ಮನೆ ಬಾಗಿಲಿಗೆ ನೀಡಲಾಗುವುದು ಎಂದರು.
ಜನರು ಅಂಚೆ ಕಚೇರಿಗಳಿಗೆ ಬರುವುದಕ್ಕಿಂತ ಹೆಚ್ಚಾಗಿ ತಂತ್ರಜ್ಞಾನದ ಸಹಾಯದಿಂದ ಅವರ ಮನೆ ಬಾಗಿಲಿಗೆ ಸೇವೆಗಳನ್ನು ತಲುಪಿಸಲಾಗುವುದು. ಡಿಜಿಟಲ್ ರೂಪಾಂತರ ಮುಂದಿನ ದಾರಿಯಾಗಲಿದೆ. ನಾಗರಿಕರಿಗೆ ಸೇವೆಗಳನ್ನು ಒದಗಿಸಲು ತಂತ್ರಜ್ಞಾನವನ್ನು ಬಳಸುವಲ್ಲಿ ಸರ್ಕಾರ ಕ್ರಮಕೈಗೊಂಡಿದೆ ಎಂದರು.
ಸಾಂಕ್ರಾಮಿಕ ಸಮಯದಲ್ಲಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಗಳನ್ನು ಬಳಸುವ ಜನರ ಮನೆಬಾಗಿಲಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಭಾರತ ಅಂಚೆ ತಲುಪಿಸಿದೆ. ಹೆಚ್ಚಿನ ಅಂಚೆ ಕಚೇರಿಗಳನ್ನು ತೆರೆಯಲು ಸರ್ಕಾರವು ಹೇಳಿದ್ದು, ಇನ್ನೂ 10,000 ಅಂಚೆ ಕಚೇರಿಗಳನ್ನು ತೆರೆಯಲು ಅನುಮತಿ ಪಡೆದಿದ್ದೇವೆ. ದೂರದ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸಲಾಗುವುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ 10,000 ಅಂಚೆ ಕಚೇರಿಗಳನ್ನು ತೆರೆಯಲಿದ್ದು, ಭಾರತದ ಒಟ್ಟು ಅಂಚೆ ಕಚೇರಿಗಳ ಸಂಖ್ಯೆ ಸುಮಾರು 1.7 ಲಕ್ಷಕ್ಕೆ ಏರಿಕೆಯಾಗಲಿದೆ ಎಂದರು.