ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರ ಕೆಲಸ ಸುಲಭವಾಗಿದೆ. ಅಂಚೆ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ. ನೆಟ್ ಬ್ಯಾಂಕಿಂಗ್ ಮೂಲಕ ಕೆಲಸವನ್ನು ಸುಲಭವಾಗಿ ಮಾಡಬಹುದು. ಖಾತೆದಾರರು ಮನೆಯಲ್ಲಿ ಕುಳಿತುಕೊಂಡು ಹಣ ವರ್ಗಾವಣೆ ಸೇರಿದಂತೆ ಆರ್‌ಡಿ, ಪಿಎಫ್, ಎನ್‌ಎಸ್‌ಸಿ ಯೋಜನೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡಬಹುದಾಗಿದೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಲು ಕೆಲವು ಷರತ್ತುಗಳಿವೆ. ಕೆವೈಸಿಗೆ ಸಂಬಂಧಿತ ದಾಖಲೆಗಳು, ಸಕ್ರಿಯ ಎಟಿಎಂ ಕಾರ್ಡ್ ಹೊಂದಿರಬೇಕು. ಮೊಬೈಲ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಬೇಕು. ಖಾತೆಗೆ ಇಮೇಲ್ ಐಡಿ ಲಿಂಕ್ ಆಗಿರಬೇಕು. ಪ್ಯಾನ್ ಸಂಖ್ಯೆ ಲಿಂಕ್ ಆಗಿರಬೇಕು.
ನೆಟ್ ಬ್ಯಾಂಕಿಂಗ್ ಗೆ ಸಂಬಂಧಿಸಿದ ಷರತ್ತುಗಳನ್ನು ಪೂರೈಸಿದ ನಂತ್ರ ಅಂಚೆ ಕಚೇರಿಯ ನೆಟ್ ಬ್ಯಾಂಕಿಂಗ್ ಗೆ ಅರ್ಜಿ ಸಲ್ಲಿಸಬಹುದು. ಇಂಟರ್ನೆಟ್ ಬ್ಯಾಂಕಿಂಗ್ ಯಶಸ್ವಿಯಾಗಿ ಸಕ್ರಿಯಗೊಂಡ ನಂತರ, ಮೊಬೈಲ್‌ನಲ್ಲಿ ಎಸ್ಎಂಎಸ್ ಬರುತ್ತದೆ. ನಂತ್ರ ಅಂಚೆ ಕಚೇರಿ ನೆಟ್‌ಬ್ಯಾಂಕಿಂಗ್ ಸೈಟ್ www.indiapost.gov.in ಗೆ ಹೋಗಿ ಅಲ್ಲಿ ಆಕ್ಟಿವ್ ಮಾಡಬೇಕು. ಗ್ರಾಹಕ ಐಡಿ ಅಥವಾ ಸಿಐಎಫ್ ಐಡಿ ಮತ್ತು ಖಾತೆಯ ಐಡಿ ಅವಶ್ಯಕ. 8004252440 ನಂಬರ್ ಗೆ ಕರೆ ಮಾಡಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಬಹುದು.