ಕೋವಿಡ್-19 ಲಾಕ್‌ಡೌನ್‌ನಿಂದ ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಮರಳಿ ಹಾದಿಗೆ ತರಲು ಆಡಳಿತಗಾರರಿಂದ ಹಿಡಿದು ದೊಡ್ಡ ಉದ್ಯಮಗಳು ಇದೀಗ ಗ್ರಾಮೀಣ ಪ್ರದೇಶ ಹಾಗೂ ಕೃಷಿಯತ್ತ ಚಿತ್ತ ಹಾಯಿಸಿವೆ.
ಈ ವರ್ಷ ಒಳ್ಳೆಯ ಮಳೆಯಾಗಿರುವ ಹಿನ್ನೆಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಫಸಲು ಸಿಗುವ ಸಾಧ್ಯತೆ ಇದೆ ಎನ್ನುವ ಆಶಾಭಾವಗಳಿವೆ. ಈ ಕಾರಣದಿಂದ ಕೃಷಿಕರಿಗೆ ಒಳ್ಳೆಯ ಆದಾಯ ಸಿಕ್ಕಿ ಅವರ ಮೂಲಕ ಆಟೋಮೊಬೈಲ್, ಸಿಮೆಂಟ್ ಹಾಗೂ ಚಿನ್ನಾಭರಣಗಳ ಕ್ಷೇತ್ರಗಳಿಗೆ ಹೊಸ ಚೈತನ್ಯ ಸಿಗುವ ಆಶಯವನ್ನು ಉದ್ಯಮಿಗಳು ಹೊಂದಿದ್ದಾರೆ.
ಭಾರತದ ಕಾರು ಮಾರುಕಟ್ಟೆಯ ದಿಗ್ಗಜರಾದ ಮಾರುತಿ ಸುಜುಕಿ ಹಾಗೂ ಹ್ಯುಂಡಾಯ್‌ಗೆ ಅಕ್ಟೋಬರ್ ತಿಂಗಳಲ್ಲಿ ಹಿಂದೆಂದೂ ಆಗಿರದ ಮಟ್ಟದಲ್ಲಿ ಸೇಲ್ ಆಗಿವೆ ಎಂದು ತಿಳಿದುಬಂದಿದೆ. ಇದೇ ವೇಳೆ ಹೀರೋ ಮೊಟೋ ಕಾರ್ಪ್ ಹಾಗೂ ಬಜಾಜ್ ಕಂಪನಿಗಳಿಗೆ ಇದೇ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಾರಾಟ ದಾಖಲಾಗಿದೆ.