ನವದೆಹಲಿ: ಕಡಿಮೆ ಬೆಲೆಗೆ ಉತ್ಪನ್ನಗಳನ್ನು ರಫ್ತು ಮಾಡಿ ದೇಶಿಯ ಉತ್ಪಾದಕರ ಮೇಲೆ ಪ್ರಹಾರ ನಡೆಸುತ್ತಿದ್ದ ಚೀನಾ ಸರಕುಗಳಿಗೆ ಕೇಂದ್ರ ಸರ್ಕಾರ ಆಂಟಿ ಡಂಪಿಂಗ್ ತೆರಿಗೆ ಹೇರಿದೆ.
ವಾಣಿಜ್ಯ ಮಹಾ ನಿರ್ದೇಶನಾಲಯದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಐದು ವರ್ಷಗಳ ಅವಧಿಗೆ ಚೀನಾದ ಉತ್ಪನ್ನಗಳ ಮೇಲೆ ದುಬಾರಿ ಮೊತ್ತದ ಆಂಟಿ ಡಂಪಿಂಗ್ ತೆರಿಗೆಯನ್ನು ವಿಧಿಸಿ ಆದೇಶ ಹೊರಡಿಸಿದೆ.
ಡೈ ಉದ್ಯಮದಲ್ಲಿ ಬಳಸುವ ಸೋಡಿಯಂ ಹೈಡ್ರೋಸಲ್ಫೈಟ್, ಸೌರವಿದ್ಯುತ್ ಫೋಟೋವೋಲ್ಟಾನಿಕ್ ಮಾಡ್ಯೂಲ್ ಗಳ ತಯಾರಿಕೆಯಲ್ಲಿ ಬಳಸುವ ಸಿಲಿಕಾನ್ ಸೀಲಾಂಟ್, ರೆಫ್ರಿಜರೇಷನ್ ಕೈಗಾರಿಕೆಯಲ್ಲಿ ಬಳಕೆ ಮಾಡುವ ಹೈಡ್ರೋಫ್ಲೋರೋಕಾರ್ಬನ್ ಸೇರಿ 5 ಉತ್ಪನ್ನಗಳ ಮೇಲೆ ಭಾರತ ದುಬಾರಿ ಸುರಿ ತೆರಿಗೆ ಹೇರಿದೆ.