ನವದೆಹಲಿ: ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಂದ ಪರಿಸರದ ಮೇಲೆ ಆಗುತ್ತಿರುವ ಅಗಾಧ ಹಾನಿಯನ್ನು ತಗ್ಗಿಸಲು ಭಾರತ ಜುಲೈ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಿದೆ.
ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ದೇಶಾದ್ಯಂತ ಗುರುತಿಸಲಾದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧ ಹೇರಲಾಗಿದೆ.
ನಿಷೇಧಿತ ವಸ್ತುಗಳ ಪಟ್ಟಿ:
ಪ್ಲಾಸ್ಟಿಕ್ ಕಡ್ಡಿಗಳೊಂದಿಗೆ ಇಯರ್ ಬಡ್ಸ್
ಆಕಾಶಬುಟ್ಟಿಗಳಿಗೆ ಪ್ಲಾಸ್ಟಿಕ್ ತುಂಡುಗಳು
ಪ್ಲಾಸ್ಟಿಕ್ ಚೀಲಗಳು
ಕ್ಯಾಂಡಿ ತುಂಡುಗಳು
ಐಸ್ ಕ್ರೀಮ್ ತುಂಡುಗಳು
ಅಲಂಕಾರಕ್ಕಾಗಿ ಪಾಲಿಸ್ಟೈರೀನ್(ಥರ್ಮೋಕೋಲ್).
ಪ್ಲಾಸ್ಟಿಕ್ ಪ್ಲೇಟ್‌ಗಳು, ಕಪ್ ಗಳು, ಗ್ಲಾಸ್ ಗಳು, ಫೋರ್ಕ್ ಗಳು, ಚಮಚಗಳು, ಚಾಕುಗಳು, ಟ್ರೇಗಳು
ಸ್ವೀಟ್ ಬಾಕ್ಸ್ ಸುತ್ತಲೂ ಫಿಲ್ಮ್ ಗಳನ್ನು ಸುತ್ತುವುದು ಅಥವಾ ಪ್ಯಾಕ್ ಮಾಡುವುದು
ಆಮಂತ್ರಣ ಪತ್ರಗಳು
ಸಿಗರೇಟ್ ಪ್ಯಾಕೆಟ್‌ಗಳು
100 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಅಥವಾ PVC ಬ್ಯಾನರ್ ಗಳು
ಜೀವನಶೈಲಿಗೆ ಈ ಹಿಂದೆ ಅತ್ಯಗತ್ಯವಾಗಿದ್ದ ಪ್ಲಾಸ್ಟಿಕ್ ವಸ್ತುಗಳಿಲ್ಲದೆ ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಹೇಗೆ ಮುಂದುವರಿಸುವುದು ಎಂದು ನೀವು ಚಿಂತೆ ಮಾಡುತ್ತಿದ್ದರೆ, ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಸೂಚಿಸಿದಂತೆ ಈ ಸುಲಭ ಮತ್ತು ಕೈಗೆಟುಕುವ ಪರ್ಯಾಯಗಳನ್ನು ಬಳಸಬಹುದಾಗಿದೆ.
ಪ್ಲಾಸ್ಟಿಕ್ ಗೆ ಪರ್ಯಾಯಗಳು
ಸ್ಟೇನ್ ಲೆಸ್ ಸ್ಟೀಲ್ ಸ್ಟ್ರಾಗಳು, ಬಿದಿರಿನ ಸ್ಟ್ರಾಗಳು, ಪಾಸ್ಟಾ ಸ್ಟ್ರಾಗಳು ಮತ್ತು ರೈಸ್ ಸ್ಟ್ರಾಗಳನ್ನು ಪ್ರಯತ್ನಿಸಿ
ಬಲೂನ್ ಗಳ ಬದಲಿಗೆ, ಹೂವುಗಳು, DIY ಪೇಪರ್ ಹೂಗಳು, ಪೇಪರ್ ಲ್ಯಾಂಟರ್ನ್ ಗಳು, ಮರುಬಳಕೆಯ ಬಂಟಿಂಗ್ ನಂತಹ ಹೆಚ್ಚು ಪರಿಸರ ಸ್ನೇಹಿ ಅಲಂಕಾರಗಳನ್ನು ಆಯ್ಕೆಮಾಡಿ
ಪ್ಲಾಸ್ಟಿಕ್ ಇಯರ್ ಬಡ್‌ಗಳನ್ನು ತ್ಯಜಿಸಿ ಮತ್ತು ಬಿದಿರಿನ ಹತ್ತಿ ಬಡ್ ಗಳಿಗೆ ಅಥವಾ ದ್ರವದ ಇಯರ್ ವಾಶ್ ಗಳಿಗೆ ಬದಲಿಸಿ. ನೀವು ಮೇಕ್ ಅಪ್ ಮಾಡಲು ಇಯರ್ ಬಡ್ಸ್ ಅನ್ನು ಬಳಸಿದರೆ, ಹತ್ತಿಯನ್ನು ಮೇಕಪ್ ರಿಮೂವರ್ ಟೂಲ್ ಆಗಿ ಆರಿಸಿಕೊಳ್ಳಿ.
ಮರುಬಳಕೆ ಮಾಡಬಹುದಾದ ಗಾಜಿ, ಇತರೆ ಲೋಟ ಅಥವಾ ಮಗ್ ಅನ್ನು ತೆಗೆದುಕೊಂಡು ಹೋಗಿ ಪರಿಸರ ಉಳಿಸಿ.
ಮರುಬಳಕೆ ಮಾಡಬಹುದಾದ ಬಿದಿರಿನ ವಸ್ತು, ಪಾತ್ರೆಗಳನ್ನು ಬಳಸಲು ಪ್ರಯತ್ನಿಸಿ. ದಿನಸಿ ಶಾಪಿಂಗ್‌ಗಾಗಿ, ಮನೆಯಿಂದ ಸೆಣಬು ಅಥವಾ ಬಟ್ಟೆಯ ಚೀಲಗಳನ್ನು ಒಯ್ಯಿರಿ.
ಪ್ಲಾಸ್ಟಿಕ್ ಬದಲಿಗೆ ದೀರ್ಘಾವಧಿಗೆ ಸ್ಟೀಲ್ ಬಾಟಲಿಯನ್ನು ನೀವೇ ತೆಗೆದುಕೊಳ್ಳಿ.