![](https://kannadadunia.com/wp-content/uploads/2023/10/rice-rice.png)
ನವದೆಹಲಿ: ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ 7 ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ ಎಂದು ಸರ್ಕಾರ ಬುಧವಾರ ಹೇಳಿದೆ.
ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್(NCEL) ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ(DGFT) ಅಧಿಸೂಚನೆಯಲ್ಲಿ ತಿಳಿಸಿದೆ.
ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಜುಲೈ 20 ರಂದು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತುಗಳನ್ನು ನಿಷೇಧಿಸಲಾಗಿದೆಯಾದರೂ, ಕೆಲವು ದೇಶಗಳಿಗೆ ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಮತ್ತು ವಿನಂತಿಯ ಮೇರೆಗೆ ಸರ್ಕಾರವು ನೀಡಿದ ಅನುಮತಿಯ ಆಧಾರದ ಮೇಲೆ ರಫ್ತುಗಳನ್ನು ಅನುಮತಿಸಲಾಗಿದೆ.
ನೇಪಾಳ, ಕ್ಯಾಮರೂನ್, ಕೋಟ್ ಡಿ’ ಐವೋರ್, ಗಿನಿಯಾ, ಮಲೇಷಿಯಾ, ಫಿಲಿಪೈನ್ಸ್ ಮತ್ತು ಸೀಶೆಲ್ಸ್ ಗೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಸೂಚಿಸಲಾಗಿದೆ.
ನೇಪಾಳಕ್ಕೆ ಸೂಚಿಸಲಾದ ಪ್ರಮಾಣವು 95,000 ಟನ್‌ಗಳು, ಕ್ಯಾಮರೂನ್(1,90,000 ಟನ್‌ಗಳು), ಕೋಟ್ ಡಿ ಐವೊರ್(1,42,000 ಟನ್‌ಗಳು), ಗಿನಿಯಾ(1,42,000 ಟನ್‌ಗಳು), ಮಲೇಷ್ಯಾ(1,70,000 ಟನ್‌ಗಳು), ಫಿಲಿಪೈನ್ಸ್(2,95, 000 ಟನ್‌ಗಳು ), ಮತ್ತು ಸೀಶೆಲ್ಸ್ (800 ಟನ್).