ಮಿಸ್ಡ್ ಕಾಲ್ ಕೊಟ್ರೆ ಸಾಕು ಸಿಲಿಂಡರ್ ಬುಕ್ ಮಾಡಬಹುದಾಗಿದೆ. ಇಂಡೇನ್ ಗ್ಯಾಸ್ ಗ್ರಾಹಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.
ದೇಶದ ಯಾವುದೇ ಭಾಗದಲ್ಲಿರುವ ಇಂಡೇನ್ ಗ್ಯಾಸ್ ಗ್ರಾಹಕರು ತಮ್ಮ ನೊಂದಾಯಿತ ಸಂಖ್ಯೆ ಮೂಲಕ 845 495 5555 ಸಂಖ್ಯೆಗೆ ಒಂದು ಸಲ ಮಿಸ್ಡ್ ಕಾಲ್ ಕೊಡುವ ಮೂಲಕ ತಮ್ಮ ಸಿಲಿಂಡರ್ ಕಾಯ್ದಿರಿಸಬಹುದಾಗಿದೆ.
IVRS ಕರೆಗಳಿಗೆ ತಗಲುವ ಯಾವುದೇ ವೆಚ್ಚವು ಮಿಸ್ಡ್ ಕಾಲ್ ಸೇವೆಗೆ ತಗಲುವುದಿಲ್ಲ. ಗ್ರಾಹಕರು ತಮ್ಮ ಸಿಲಿಂಡರ್ ಬುಕ್ಕಿಂಗ್ ಆಗಿ ಹೆಚ್ಚು ಹೊತ್ತು ಮೊಬೈಲ್ ಬಳಸುವುದನ್ನು ತಪ್ಪಿಸಬಹುದಾಗಿದೆ. ಕೇವಲ ಮಿಸ್ಡ್ ಕಾಲ್ ನೀಡುವ ಮೂಲಕ ಗ್ರಾಹಕರು ಅಡುಗೆ ಅನಿಲ ಸಿಲಿಂಡರ್ ಕಾಯ್ದಿರಿಸುವ ವ್ಯವಸ್ಥೆಯನ್ನು ಇಂಡೇನ್ ಗ್ಯಾಸ್ ಕಲ್ಪಿಸಿದೆ.