ನವದೆಹಲಿ: ಎರಡು ವರ್ಷದಿಂದ ಐಟಿಆರ್ ಸಲ್ಲಿಸದಿದ್ದರೆ ಎರಡುಪಟ್ಟು ಟಿಡಿಎಸ್ ಕಡಿತವಾಗಲಿದೆ. ಜುಲೈ 1 ರಿಂದ ಹೊಸ ನಿಯಮ ಜಾರಿಯಾಗಲಿದೆ.
ಆದಾಯ ತೆರಿಗೆ ವಿವರವನ್ನು ಎರಡು ವರ್ಷಗಳಿಂದ ಸಲ್ಲಿಸದೇ ಬಾಕಿ ಉಳಿಸಿಕೊಂಡಿದ್ದರೆ ಎರಡು ಪಟ್ಟು ಟಿಡಿಎಸ್ ಕಡಿತ ಮಾಡಲಾಗುವುದು. ಕೇಂದ್ರ ಸರ್ಕಾರ ಟಿಡಿಎಸ್ ಕಡಿತಕ್ಕೆ ನೂತನ 206 ಎಬಿ ಸೆಕ್ಷನ್ ಅನ್ನು ಜಾರಿ ಮಾಡಿದ್ದು, ಎರಡು ವರ್ಷದಿಂದ ಐಟಿಆರ್ ಸಲ್ಲಿಕೆ ಮಾಡದೇ ಇದ್ದವರಿಗೆ ಜುಲೈ 1 ರಿಂದ ಎರಡುಪಟ್ಟು ಟಿಡಿಎಸ್ ಕಡಿತಗೊಳಿಸಬೇಕೆಂದು ಹೇಳಲಾಗಿದೆ.
50 ಸಾವಿರ ರೂಪಾಯಿಗಿಂತ ಹೆಚ್ಚು ಟಿಡಿಎಸ್ ಕ್ಲೈಮ್ ಗೆ ಅರ್ಹರಾದವರು ಎರಡು ವರ್ಷದಿಂದ ಐಟಿಆರ್ ಸಲ್ಲಿಕೆ ಮಾಡದಿದ್ದರೆ, ಹೆಚ್ಚಿನ ಟಿಡಿಎಸ್ ಕಡಿತವಾಗುತ್ತದೆ.
ಹೊಸ ನಿಯಮದ ಪ್ರಕಾರ, ಉದ್ಯೋಗಿ ಕಳೆದ ಎರಡು ವರ್ಷದಿಂದ ಟಿಡಿಎಸ್ ಕ್ಲೈಮ್ ಮಾಡಿಕೊಳ್ಳದೆ ಇದ್ದರೆ ಅವರ ವೇತನದಿಂದ ಎರಡುಪಟ್ಟು ಟಿಡಿಎಸ್ ಕಡಿತ ಮಾಡುವುದು ಕಂಪನಿಗಳ ಜವಾಬ್ದಾರಿಯಾಗಿರುತ್ತದೆ. ಶೇಕಡ 10ರಷ್ಟು ಟಿಡಿಎಸ್ ಕಡಿತ ಮಾಡುತ್ತಿದ್ದವರಿಗೆ ಎರಡುಪಟ್ಟು ಅಂದರೆ ಶೇಕಡ 20 ರಷ್ಟು ಕಡಿತಗೊಳ್ಳಲಿದೆ ಎನ್ನಲಾಗಿದೆ.