COVID-19 ಲಾಕ್‌ಡೌನ್ ಕಾರಣದಿಂದಾಗಿ 2019-20ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಲಾಗಿದೆ.
ತಮ್ಮ ಅಕೌಂಟ್‌ಗಳ ಆಡಿಟಿಂಗ್ ಮಾಡಬೇಕಾಗಿರುವ ತೆರಿಗೆ ಪಾವತಿದಾರರಿಗೆ ಐಟಿ ರಿಟರ್ನ್ಸ್ ಸಲ್ಲಿಸಲು ಇರುವ ಡೆಡ್‌ಲೈನ್ ಅನ್ನು ಇನ್ನೂ ಎರಡು ತಿಂಗಳುಗಳ ಮಟ್ಟಿಗೆ ವಿಸ್ತರಿಸಲಾಗಿದೆ.
ಕಳೆದ ಮೇನಲ್ಲಿ ಐಟಿಆರ್ ಅನ್ನು ಸಲ್ಲಿಸಲು ಇದ್ದ ಡೆಡ್‌ಲೈನ್ ಅನ್ನು ಜುಲೈ 31ರಿಂದ ನವೆಂಬರ್ 30ಕ್ಕೆ ವಿಸ್ತರಿಸಿದ್ದ ಕೇಂದ್ರ ಸರ್ಕಾರ, ಇದೀಗ ಮತ್ತೊಂದು ಡೆಡ್ಲೈನ್ ನಿಗದಿ ಮಾಡಿದೆ. ತೆರಿಗೆ ರಿಟರ್ನ್ಸ್ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ತೆರಿಗೆ ಪಾವತಿದಾರರಿಗೆ ಇನ್ನಷ್ಟು ಕಾಲಾವಧಿ ನೀಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (CBDT) ತಿಳಿಸಿದೆ.