ಮುಂದಿನ ತಿಂಗಳು ಹೊಸ ಇ-ಫೈಲಿಂಗ್ ವೆಬ್ ಪೋರ್ಟಲ್ ಪರಿಚಯಿಸಲು ಆದಾಯ ತೆರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಹೊಸ ಪೋರ್ಟಲ್‌ಗೆ ಲಾಗಿನ್ ಆಗ್ಬೇಕು. ಹೊಸ ಪೋರ್ಟಲ್ ಹೆಚ್ಚು ಸರಳವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಅಸ್ತಿತ್ವದಲ್ಲಿರುವ ವೆಬ್ ಪೋರ್ಟಲ್ ತೆಗೆದುಹಾಕಲಾಗುತ್ತದೆ. ಅಸ್ತಿತ್ವದಲ್ಲಿರುವ ಪೋರ್ಟಲ್ ಜೂನ್ 1 ರಿಂದ ಜೂನ್ 6 ರವರೆಗೆ ಬ್ಲ್ಯಾಕೌಟ್ ಅವಧಿಯಲ್ಲಿ ಉಳಿಯಲಿದೆ. ಯಾವುದೇ ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾದರೆ ಅಥವಾ ಅಪ್ಲೋಡ್ ಮಾಡಬೇಕಾದರೆ ಅಥವಾ ಡೌನ್‌ಲೋಡ್ ಮಾಡಬೇಕಾದರೆ ಜೂನ್ 1 ರ ಮೊದಲು ಪೂರ್ಣಗೊಳಿಸಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌ನ ಹೊಸ ಪೋರ್ಟಲ್ ಜೂನ್ 7 ರಿಂದ ನೇರ ಪ್ರಸಾರವಾಗಲಿದೆ. ಹಳೆಯ ಪೋರ್ಟಲ್ www.incometaxindiaefiling.gov.in ಬದಲಿಗೆ ಹೊಸ ಪೋರ್ಟಲ್ www.incometaxgov.in ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ಹಣಕಾಸು ವರ್ಷದ ಕೊನೆ ದಿನ ಮಾರ್ಚ್ 31 ರಂದು ಆದಾಯ ತೆರಿಗೆ ಇಲಾಖೆಯ ಅಸ್ತಿತ್ವದಲ್ಲಿರುವ ಇ-ರಿಟರ್ನ್ ಫೈಲಿಂಗ್ ಪೋರ್ಟಲ್‌ನಲ್ಲಿ ದೊಡ್ಡ ತಾಂತ್ರಿಕ ದೋಷ ಕಂಡುಬಂದಿತ್ತು.
ಹೊಸ ಪೋರ್ಟಲ್ ನಲ್ಲಿ ಸಮಸ್ಯೆ ಕಂಡು ಬಂದಲ್ಲಿ ಜೂನ್ 10ರ ನಂತ್ರ ದೂರು ದಾಖಲಿಸಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿಯವರೆಗೆ ಹೊಸ ಪೋರ್ಟಲನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.