ನವದೆಹಲಿ: ಗೊಂದಲ ಮುಕ್ತ ಹಾಗೂ ಆಕರ್ಷಕ ತೆರಿಗೆ ಪದ್ಧತಿ ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದಾಯ ತೆರಿಗೆಯ ವಿನಾಯಿತಿಯನ್ನು ಸಂಪೂರ್ಣ ಕೈಬಿಡಲು ಹಣಕಾಸು ಇಲಾಖೆ ಹೊಸ ಪ್ರಸ್ತಾವನೆ ಸಿದ್ಧಪಡಿಸಿದೆ.
ಆದಾಯ ತೆರಿಗೆ ಪಾವತಿದಾರರಿಗೆ ವಿನಾಯಿತಿಯನ್ನು ಸಂಪೂರ್ಣ ತೆಗೆದು ಹಾಕಿ ಆದಾಯ ತೆರಿಗೆ ದರವನ್ನು ಸ್ವಲ್ಪ ಕಡಿಮೆ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿದ್ದು, ತೆರಿಗೆ ಪದ್ಧತಿಯನ್ನು ಗೊಂದಲ ಮುಕ್ತ ಮತ್ತು ಆಕರ್ಷಕವಾಗಿಸಲು ಕ್ರಮ ಕೈಗೊಳ್ಳಲಾಗಿದೆ.
ಆದಾಯ ತೆರಿಗೆ ವಿನಾಯಿತಿ ಬೇಡ ಎಂದವರಿಗೆ ಕಡಿಮೆ ತೆರಿಗೆ ವಿಧಿಸುವ ಪ್ರಸ್ತಾಪವಿದೆ. ಕೇಂದ್ರ ಸರ್ಕಾರ 2020- 21 ರಲ್ಲಿ ಪರಿಚಯಿಸಿದ್ದ ತೆರಿಗೆ ಪದ್ಧತಿಯಲ್ಲಿ ಎರಡು ವಿಧಗಳಿದ್ದು, ಮೊದಲನೆಯದರಲ್ಲಿ ಹಲವು ವಿನಾಯಿತಿ ಇವೆ. ಎರಡನೇ ವಿಧಾನದಲ್ಲಿ ತೆರೆಗೆ ವಿನಾಯಿತಿ ಇಲ್ಲ. ಆದರೆ, ಕಡಿಮೆ ಪ್ರಮಾಣದ ತೆರಿಗೆ ಇದೆ. ತೆರಿಗೆದಾರರು ತಮಗೆ ಇಷ್ಟವಾದ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಈ ಗೊಂದಲ ತೆಗೆದುಹಾಕಿ ವಿನಾಯಿತಿ ಮುಕ್ತ ತೆರಿಗೆ ಪದ್ಧತಿ ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.