ಸುರಕ್ಷಿತ ಹೂಡಿಕೆ ಬಗ್ಗೆ ಜನರಲ್ಲಿ ಗೊಂದಲ ಏರ್ಪಡುವುದು ಸಹಜ. ಯಾವ ಹೂಡಿಕೆ ಸುರಕ್ಷಿತ ಎಂಬ ಸಮಸ್ಯೆ ಜೊತೆಗೆ ಯಾವ ಹೂಡಿಕೆಯಲ್ಲಿ ತೆರಿಗೆ ಉಳಿತಾಯ ಮಾಡಬಹುದು ಎಂಬ ಪ್ರಶ್ನೆ ಎದುರಾಗುತ್ತದೆ. ಪಿಪಿಎಫ್, ಎನ್‌ಎಸ್‌ಸಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳು ಅತ್ಯಂತ ಜನಪ್ರಿಯ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಇದಕ್ಕೆ ದೊಡ್ಡ ಕಾರಣವೆಂದರೆ ಅದರಲ್ಲಿ ಗ್ರಾಹಕರ ಹೂಡಿಕೆ ಸುರಕ್ಷಿತವಾಗಿರುತ್ತದೆ. ಈ ಯೋಜನೆಗಳ ಹೂಡಿಕೆಯಲ್ಲಿ ತೆರಿಗೆ ರಿಯಾಯಿತಿ ಸಿಗುತ್ತದೆ.
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆ ಇಇಇ ಸ್ಟೇಟಸ್ ಅಡಿ ಬರುತ್ತದೆ. ಇದ್ರಲ್ಲಿ ಹೂಡಿಕೆ ಮಾಡಿದ್ರೆ ಮೂರು ಕಡೆ ತೆರಿಗೆ ಪ್ರಯೋಜನ ಪಡೆಯಬಹುದು. ಹೂಡಿಕೆ ಮಾಡುವ ವೇಳೆ, ಬಡ್ಡಿಯಲ್ಲಿ ಹಾಗೂ ಮುಕ್ತಾಯದ ವೇಳೆ ಪಡೆಯುವ ಹಣಕ್ಕೆ ತೆರಿಗೆ ವಿಧಿಸಬೇಕಾಗಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನ ಪಡೆಯಬಹುದು.
GOOD NEWS: ಆಧಾರ್ ಕಾರ್ಡ್ ಮೂಲಕ ಕೆಲವೇ ಕ್ಷಣಗಳಲ್ಲಿ ತಯಾರಿಸಿ ಪಾನ್ ಕಾರ್ಡ್
ಸುಕನ್ಯಾ ಸಮೃದ್ಧಿ ಯೋಜನೆಯಲ್ಲೂ ತೆರಿಗೆ ರಿಯಾಯಿತಿ ಪಡೆಯಬಹುದು. ಮುಕ್ತಾಯದ ಸಮಯದಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಸಿಗುವ ಬಡ್ಡಿ ತೆರಿಗೆ ಮುಕ್ತವಾಗಿರುತ್ತದೆ. ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರಗಳು ಕೂಡ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅರ್ಹವಾಗಿದೆ. ಮುಕ್ತಾಯದ ವರ್ಷವನ್ನು ಹೊರತುಪಡಿಸಿ ಹೂಡಿಕೆಯಿಂದ ಬರುವ ಆದಾಯವು ತೆರಿಗೆ ಮುಕ್ತವಾಗಿರುತ್ತದೆ.