ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಐಟಿ ವಿವರಗಳನ್ನು ಅಂತರ್ಜಾಲದ ಮೂಲಕ ಸಲ್ಲಿಸಲು ಅನುಕೂಲವಾಗುವಂತೆ ಆದಾಯ ತೆರಿಗೆ ಇಲಾಖೆ ಹೊಸ ಇ –ಫೈಲಿಂಗ್ ಪೋರ್ಟಲ್ ಗೆ ಚಾಲನೆ ನೀಡುವ ಸಾಧ್ಯತೆ ಇದೆ.
ತೆರಿಗೆ ವಿವರ ಸಲ್ಲಿಸಲು ಹೊಸ ಪೋರ್ಟಲ್ ಜೂನ್ ಆರಂಭದಲ್ಲಿ ಚಾಲನೆ ಸಿಗಲಿದೆ. ಈಗಿರುವ ಪೋರ್ಟಲ್ ಗಿಂತ ಹೊಸ ಪೋರ್ಟಲ್ ಬಳಕೆದಾರರ ಸ್ನೇಹಿಯಾಗಿರಲಿದೆ ಎಂದು ಹೇಳಲಾಗಿದೆ.
ಜೂನ್ 7 ರ ಮೊದಲು ಹೊಸ ಪೋರ್ಟಲ್ ಗೆ ಬದಲಾಗುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪ್ರಸ್ತುತ www.incometaxindiaefiling.gov.in ಪೋರ್ಟಲ್ ನಿಂದ www.incometaxgov.in ಹೊಸ ಪೋರ್ಟಲ್ ಗೆ ಬದಲಾವಣೆಯಾಗಲಿದೆ ಎನ್ನಲಾಗಿದೆ.