ನವದೆಹಲಿ: ಐಟಿ ರಿಟರ್ನ್ಸ್ ಪರಿಷ್ಕರಣೆಗೆ ಕೇಂದ್ರದಿಂದ ಹೊಸ ಫಾರ್ಮ್ ಬಿಡುಗಡೆ ಮಾಡಲಾಗಿದೆ. ತೆರಿಗೆ ಸಲ್ಲಿಸಲು ಕಾರಣವನ್ನು ಕೂಡ ನೀಡಬೇಕಿದೆ.
ಆದಾಯ ತೆರಿಗೆ ಇಲಾಖೆ ಪರಿಷ್ಕೃತ ಆದಾಯದ ಮೇಲಿನ ತೆರಿಗೆ ಪಾವತಿಸಲು ಹೊಸ ಫಾರ್ಮ್ ಬಿಡುಗಡೆ ಮಾಡಿದ್ದು, ಇದರಲ್ಲಿ ತೆರಿಗೆ ಪಾವತಿಸುವವರು ಸಲ್ಲಿಸಬೇಕಾದ ಆದಾಯದ ಮೊತ್ತದೊಂದಿಗೆ ಅದನ್ನು ಸಲ್ಲಿಸಲು ನಿಖರವಾದ ಕಾರಣವನ್ನು ಕೂಡ ನೀಡಬೇಕಿದೆ.
2019 -20 ಮತ್ತು 2020 -21 ನೇ ಹಣಕಾಸು ವರ್ಷದಲ್ಲಿ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ತೆರಿಗೆ ಪಾವತಿದಾರರಿಗೆ ಹೊಸ ಫಾರ್ಮ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ತೆರಿಗೆ ಪಾವತಿದಾರರು ತಮ್ಮ ಆದಾಯ ಪರಿಷ್ಕರಿಸುವ ಫಾರಂನಲ್ಲಿ ಆದಾಯವನ್ನು ಸರಿಯಾಗಿ ನಮೂದಿಸಬೇಕಿದೆ. ಆದಾಯದ ಮೊತ್ತದೊಂದಿಗೆ ಅದನ್ನು ಸಲ್ಲಿಸಲು ಕಾರಣ ಕೂಡ ನೀಡಬೇಕಿದೆ ಎನ್ನಲಾಗಿದೆ.