alex Certify ಪಾನ್ ಕಾರ್ಡ್ ಗೆ ‘ಆಧಾರ್’ ಜೋಡಣೆ ಮಾಡದವರಿಗೆ ಶಾಕ್: ಮುಂದಿನ ತಿಂಗಳಿಂದ ವೇತನ ಸ್ಥಗಿತ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾನ್ ಕಾರ್ಡ್ ಗೆ ‘ಆಧಾರ್’ ಜೋಡಣೆ ಮಾಡದವರಿಗೆ ಶಾಕ್: ಮುಂದಿನ ತಿಂಗಳಿಂದ ವೇತನ ಸ್ಥಗಿತ…?

ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಜೋಡಣೆ ಮಾಡದವರಿಗೆ ಮುಂದಿನ ತಿಂಗಳಿಂದ ವೇತನ ಬರುವುದು ಅನುಮಾನವೆನ್ನಲಾಗಿದೆ.

ಪಾನ್ ಕಾರ್ಡ್ ನೊಂದಿಗೆ ಆಧಾರ್ ಜೋಡಣೆ ಮಾಡದಿದ್ದರೆ, ಮುಂದಿನ ತಿಂಗಳಿನಿಂದ ವೇತನ ಕಡಿತವಾಗಬಹುದು. ಆದಾಯ ತೆರಿಗೆ ಇಲಾಖೆ ಪಾನ್ -ಆಧಾರ್ ಕಾರ್ಡ್ ಜೋಡಣೆಗೆ ಸಂಬಂಧಿಸಿದಂತೆ ಕ್ರಮಕೈಗೊಂಡಿದ್ದು, ಜೂನ್ 30 ರೊಳಗೆ ಪಾನ್ -ಆಧಾರ್ ಕಡ್ಡಾಯವಾಗಿ ಜೋಡಣೆ ಮಾಡಲು ಸಮಯ ನಿಗದಿ ಮಾಡಲಾಗಿದೆ.

ಎಲ್ಲ ಉದ್ಯೋಗಿಗಳು ತಮ್ಮ ಖಾತೆಗೆ ಪಾನ್ ಆಧಾರ್ ಜೋಡಣೆ ಆಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವಂತೆ ಕಂಪನಿಗಳು ತಿಳಿಸಿದ್ದು, ಪಾನ್ ಕಾರ್ಡ್ ನೊಂದಿಗೆ ಆಧಾರ್ ಜೋಡಣೆಯಾಗದ ಉದ್ಯೋಗಿಗಳಿಗೆ ವೇತನ ಜಮಾ ಮಾಡುವುದಿಲ್ಲ ಎಂದು ಹೇಳಲಾಗಿದೆ. ಆಧಾರ್ ಜೋಡಣೆಯಾಗದ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯ ಎಂದು ಘೋಷಿಸಲಾಗುತ್ತದೆ. ವೇತನವನ್ನೂ ಕಡಿತ ಮಾಡಬಹುದಾಗಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...