ನವದೆಹಲಿ: ಆದಾಯ ತೆರಿಗೆ ಸಿಬಿಡಿಟಿ ಸೆಟಲ್ಮೆಂಟ್ಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ) ಮಂಗಳವಾರ ಆದಾಯ ತೆರಿಗೆದಾರರು ಸೆಪ್ಟೆಂಬರ್ 30 ರವರೆಗೆ ಇತ್ಯರ್ಥಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಹೇಳಿದೆ.
31 ಜನವರಿ, 2021 ರೊಳಗೆ ಬಾಕಿ ಇರುವ ಇತ್ಯರ್ಥ ಅರ್ಜಿಗಳನ್ನು ವಿಲೇವಾರಿ ಮಾಡಲು ಕೇಂದ್ರ ಸರ್ಕಾರ ಮಧ್ಯಂತರ ಮಂಡಳಿ ರಚಿಸಿದೆ ಎಂದು ಹೇಳಲಾಗಿದೆ. ತೆರಿಗೆದಾರರು ಬಾಕಿ ಇರುವ ಪ್ರಕರಣಗಳಲ್ಲಿ, ತಮ್ಮ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ಹಿಂಪಡೆಯಲು ಮತ್ತು ಹಿಂಪಡೆಯುವ ಬಗ್ಗೆ ಮೌಲ್ಯಮಾಪನ ಅಧಿಕಾರಿಗೆ ತಿಳಿಸಲು ಅವಕಾಶವಿದೆ ಎಂದು ತಿಳಿಸಲಾಗಿದೆ.
01.02.2021 ರ ವೇಳೆಗೆ ಹಲವಾರು ತೆರಿಗೆದಾರರು ಐಟಿಎಸ್ಸಿಯ ಮುಂದೆ ತಮ್ಮ ಅರ್ಜಿ ಇತ್ಯರ್ಥಕ್ಕಾಗಿ ಮನವಿ ಮಾಡಿದ್ದಾರೆ. ಇದಲ್ಲದೆ, ಕೆಲವು ತೆರಿಗೆದಾರರು ಹೈಕೋರ್ಟ್ಗಳಿಗೆ ಮೊರೆ ಹೋಗಿದ್ದಾರೆ. ಇವರೆಲ್ಲ ಸಮಸ್ಯೆ ಇತ್ಯರ್ಥಕ್ಕಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಕೆಲವು ಅರ್ಜಿ ವಿಚಾರಣೆ ಸಂದರ್ಭಗಳಲ್ಲಿ ಹೈಕೋರ್ಟ್ಗಳು ಮಧ್ಯಂತರ ಪರಿಹಾರ ನೀಡಿವೆಯಲ್ಲದೇ, 01.02.2021 ರ ನಂತರವೂ ಪರಿಹಾರದ ಅರ್ಜಿಗಳನ್ನು ಸ್ವೀಕರಿಸಲು ನಿರ್ದೇಶಿಸಿವೆ. ಇದು ಅನಿಶ್ಚಿತತೆ ಮತ್ತು ಸುದೀರ್ಘ ವ್ಯಾಜ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.
31.01.2021 ರಂತೆ ಅರ್ಜಿ ಸಲ್ಲಿಸಲು ಅರ್ಹರಾಗಿರುವ ತೆರಿಗೆದಾರರಿಗೆ ಪರಿಹಾರ ನೀಡಲು, ಐಟಿಎಸ್ಸಿ ವಿಧಿ ಹಣಕಾಸು ಕಾಯ್ದೆ, 2021 ರ ನಿಲುಗಡೆ ಕಾರಣದಿಂದ ಸಾಧ್ಯವಾಗಲಿಲ್ಲ. ಈಗ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಅಂದರೆ, ಮಧ್ಯಂತರ ಮಂಡಳಿಯ ಮುಂದೆ 2021 ರ ಸೆಪ್ಟೆಂಬರ್ 30 ರೊಳಗೆ ತೆರಿಗೆದಾರರು ಅರ್ಜಿ ಸಲ್ಲಿಸಬಹುದು ಎಂದು ಸಿಬಿಡಿಟಿ ತಿಳಿಸಿದೆ.
ಆದಾಗ್ಯೂ, ಅಂತಹ ಅರ್ಜಿಗಳನ್ನು ಸಲ್ಲಿಸಿದ ತೆರಿಗೆದಾರರು ಕಾಯಿದೆಯ ಸೆಕ್ಷನ್ 245 ಎಂ ನ ನಿಬಂಧನೆಗಳ ಪ್ರಕಾರ, ಅರ್ಜಿ ಹಿಂಪಡೆಯಲು ಅವಕಾಶವಿರುವುದಿಲ್ಲ ಎಂದು ಮಂಡಳಿ ಹೇಳಿದೆ.
ಇದಲ್ಲದೆ, ವಿವಿಧ ಹೈಕೋರ್ಟ್ಗಳ ನಿರ್ದೇಶನದಂತೆ ಫೆಬ್ರವರಿ 1, 2021 ಅಥವಾ ನಂತರ ಇತ್ಯರ್ಥಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ತೆರಿಗೆದಾರರು, ಅಂತಹ ಅರ್ಜಿಗಳನ್ನು ಸಲ್ಲಿಸಲು ಅರ್ಹರಾದವರು ಮತ್ತೊಮ್ಮೆ ಅರ್ಜಿಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.