ಕೊರೊನಾ ವೈರಸ್ ನಿಯಂತ್ರಣಕ್ಕೆ ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಅಗತ್ಯ ವಸ್ತುಗಳ ಸರಬರಾಜು ಮಾತ್ರ ನಡೆಯಲಿದೆ. ಹಾಗಾಗಿ ಆನ್ಲೈನ್ ನಲ್ಲಿ ವಸ್ತುಗಳ ಖರೀದಿ ವೇಳೆ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಕುಳಿತು ಆನ್ಲೈನ್ ನಲ್ಲಿ ಎಲ್ಲ ವಸ್ತುಗಳ ಖರೀದಿ ಸಾಧ್ಯವಿಲ್ಲ. ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಅನೇಕ ವಸ್ತುಗಳ ಸರಬರಾಜು ಆಗ್ತಿಲ್ಲ. ಹಾಗಾಗಿ ಆ ವಸ್ತುಗಳ ಖರೀದಿ ಸಾಧ್ಯವಿಲ್ಲ.
ಇ-ಕಾಮರ್ಸ್ ಕಂಪನಿಗಳ ಪ್ರಕಾರ, ಲಾಕ್‌ಡೌನ್ ಜಾರಿಯಲ್ಲಿರುವ ರಾಜ್ಯಗಳಲ್ಲಿ, ಮೊಬೈಲ್ ಫೋನ್ ಸೇರಿದಂತೆ ಯಾವುದೇ ಗ್ಯಾಜೆಟ್‌ಗಳನ್ನು ಮಾರಾಟ ಮಾಡಲು ಅನುಮತಿ ಇಲ್ಲ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಮಾತ್ರ ಇರಲಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಅಗತ್ಯ ವಸ್ತುಗಳ ವಿತರಣೆಯನ್ನು ಮಾತ್ರ ಮಾಡ್ತಿದ್ದೇವೆಂದು ಅಮೆಜಾನ್ ತನ್ನ ವೆಬ್‌ಸೈಟ್‌ನ ಮೇಲ್ಭಾಗದಲ್ಲಿ ಬರೆದಿದೆ. ರಿಲಾಯನ್ಸ್ ಡಿಜಿಟಲ್ ಕೂಡ ಈ ನಿಯಮವನ್ನು ಪಾಲಿಸುತ್ತಿದೆ. ಫ್ಲಿಪ್‌ಕಾರ್ಟ್ ಕೂಡ ಅಗತ್ಯ ವಸ್ತುಗಳನ್ನು ಬಿಟ್ಟು ಬೇರೆ ವಸ್ತುಗಳ ಮಾರಾಟ ಮಾಡ್ತಿಲ್ಲ.