ಡ್ರೈ ಫ್ರೂಟ್ಸ್ ಮಾರಾಟಗಾರರಿಗೆ ಈ ವರ್ಷದ ದೀಪಾವಳಿ ಖುಷಿ ನೀಡುವ ಬದಲು ದುಃಖ ನೀಡಲಿದೆ. ಚಳಿಗಾಲ ಹಾಗೂ ದೀಪಾವಳಿ ಉಡುಗೊರೆಗಾಗಿ ಅಕ್ಟೋಬರ್ ತಿಂಗಳಲ್ಲಿ ಡ್ರೈ ಫ್ರೂಟ್ಸ್ ಗೆ ಬೇಡಿಕೆ ಹೆಚ್ಚಾಗುತ್ತಿತ್ತು. ಡ್ರೈ ಫ್ರೂಟ್ಸ್ ಮಾರಾಟಗಾರರ ಜೇಬು ತುಂಬುವ ಸಂದರ್ಭದಲ್ಲಿ ಬೆಲೆ ಇಳಿದಿದೆ.
ಹಲವು ವರ್ಷಗಳ ನಂತರ ಡ್ರೈ ಫ್ರೂಟ್ಸ್ ಬೆಲೆ ಕುಸಿದಿದೆ. ಈಗಾಗಲೇ ದೀಪಾವಳಿಗೆ ಆರ್ಡರ್ ಬರ್ತಿತ್ತು. ಆದ್ರೆ ಈ ಬಾರಿ ಬೆಲೆ ಇಳಿಕೆ ಕಂಡ್ರೂ ಬೇಡಿಕೆ ಕಡಿಮೆಯಿದೆ ಎನ್ನಲಾಗ್ತಿದೆ. ಅತಿ ಹೆಚ್ಚು ಬೇಡಿಕೆ ಬರುವ ಋತುವಿನಲ್ಲಿಯೇ ಡ್ರೈ ಫ್ರೂಟ್ಸ್ ಗಳ ಬೆಲೆ ಇಳಿದಿದೆ. ಬೇಸಿಗೆಯಲ್ಲಿರುವಷ್ಟು ಬೇಡಿಕೆಯೂ ಡ್ರೈ ಫ್ರೂಟ್ಸ್ ಗೆ ಇಲ್ಲವೆಂದು ವ್ಯಾಪಾರಿಗಳು ಹೇಳಿದ್ದಾರೆ.
ಅಮೇರಿಕನ್ ಬಾದಾಮಿ ಬೆಲೆ 900 ರಿಂದ 660 ಕ್ಕೆ ಇಳಿದಿದೆ. ಗೋಡಂಬಿ ಪ್ರತಿ ಕೆ.ಜಿ.ಗೆ 1100 ರಿಂದ 950 ರೂಪಾಯಿಗೆ ಬಂದಿದೆ. ಪಿಸ್ತಾ 1400 ರಿಂದ 1100 ರೂಪಾಯಿ ಕೆ.ಜಿಯಾಗಿದೆ. ಒಣದ್ರಾಕ್ಷಿ ಕೆ.ಜಿ.ಗೆ 400 ರೂಪಾಯಿಗಳಿಂದ 350 ರೂಪಾಯಿಗೆ ಮಾರಾಟವಾಗ್ತಿದೆ. ಅಷ್ಟೇ ಅಲ್ಲ ಸಿಹಿ ತಿಂಡಿಗಳ ಬೇಡಿಕೆಯೂ ಕುಸಿದಿದೆಯಂತೆ. ಈವರೆಗೆ ಶೇಕಡಾ 10ರಷ್ಟು ಆರ್ಡರ್ ಬಂದಿಲ್ಲವೆಂದು ವ್ಯಾಪಾರಿಗಳು ಹೇಳಿದ್ದಾರೆ.