ವಿಶಾಖಪಟ್ಟಣಂ: ಸಾಮಾನ್ಯವಾಗಿ ಚುನಾವಣಾ ವರ್ಷದಲ್ಲಿ ಮತದಾರರನ್ನು ಸೆಳೆಯಲು ಸರ್ಕಾರಗಳು ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡುವುದನ್ನು ನೀವು ಕೇಳಿರಬಹುದು. ಆದರೆ, ವಿದ್ಯುತ್ ವಿತರಣಾ ಕಂಪನಿಗಳು ಕೋಟ್ಯಂತರ ರೂಪಾಯಿಗಳನ್ನು ಗ್ರಾಹಕರಿಗೆ ಮರಳಿ ನೀಡುವುದನ್ನು ನೀವು ಎಂದಾದರೂ ಕೇಳಿದ್ದೀರಾ?
ಆಂಧ್ರಪ್ರದೇಶದ ವಿದ್ಯುತ್ ಕಂಪನಿಗಳು ಐತಿಹಾಸಿಕ ಕ್ರಮ ಕೈಗೊಂಡಿವೆ. ಉಳಿತಾಯದ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ತೀರ್ಮಾನ ಕೈಗೊಂಡಿದೆ. ಸುಮಾರು 126 ಕೋಟಿ ರೂಪಾಯಿ ಹಣವನ್ನು ಗ್ರಾಹಕರಿಗೆ ನೀಡಲಾಗುವುದು.
ದೇಶದಲ್ಲೇ ಮೊದಲ ಬಾರಿಗೆ ವಿದ್ಯುತ್ ಕಂಪನಿಗಳಿಂದ ಈ ರೀತಿ ಗ್ರಾಹಕರಿಗೆ ಹಣ ವಾಪಸ್ ನೀಡಲಾಗುತ್ತಿದೆ. ಇಂಧನ ಕಂಪನಿಗಳು ಉಳಿತಾಯ ಮಾಡಿದ 126 ಕೋಟಿ ರೂ ಹಣವನ್ನು ಗ್ರಾಹಕರಿಗೆ ನೀಡಲಾಗುವುದು. ದುಬಾರಿಯಲ್ಲದ ಕಡಿಮೆ ದರದ ವಿದ್ಯುತ್ ಖರೀದಿಯಿಂದ ಉಳಿತಾಯವಾದ ಹಣವನ್ನು ಕಂಪನಿಗಳು ವಾಪಸ್ ನೀಡಲಿವೆ. ಇದಕ್ಕಾಗಿ ಅನುಮತಿ ಕೋರಿ ಆಂಧ್ರಪ್ರದೇಶ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ಅಪರೂಪದ ಪ್ರಕರಣದಲ್ಲಿ ಆಂಧ್ರಪ್ರದೇಶದ ವಿದ್ಯುತ್ ಕಂಪನಿಗಳು ಉಳಿತಾಯ ವೆಚ್ಚದ ವಿದ್ಯುತ್ ಖರೀದಿಯ ಮೂಲಕ ಉಳಿಸಿದ 126 ಕೋಟಿ ರೂಪಾಯಿಗಳನ್ನು ಬಳಕೆದಾರರಿಗೆ ರವಾನಿಸಲು ನಿರ್ಧರಿಸಿದೆ. 2021-22ರ ಮೊದಲ ತ್ರೈಮಾಸಿಕದಲ್ಲಿ ಹಣವನ್ನು ದೇಶೀಯ ಗ್ರಾಹಕರಿಗೆ ಹಿಂದಿರುಗಿಸಲು ಅನುಮೋದನೆ ಕೋರಿ ಕಂಪನಿಗಳು ಎಪಿ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಎಪಿಇಆರ್‌ಸಿ) ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಸುಮಾರು 1.45 ಕೋಟಿ ಗ್ರಾಹಕರು ಪ್ರಯೋಜನ ಪಡೆಯುತ್ತಾರೆ.