ನವದೆಹಲಿ: ಪಡಿತರ ಚೀಟಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ವಿತರಕರು ನಿಮಗೆ ಕಡಿಮೆ ಪಡಿತರ ನೀಡುತ್ತಿದ್ದರೆ ತಕ್ಷಣ ಈ ಸಂಖ್ಯೆಗಳಿಗೆ ದೂರು ನೀಡಬಹುದಾಗಿದೆ.
ಪಡಿತರ ಚೀಟಿ(Ration Card) ಮೂಲಕ ಪಡಿತರ ಪಡೆಯಬಹುದು. ಪಡಿತರ ಚೀಟಿದಾರರಿಗೆ ಪಡಿತರ ನೀಡಲು ವಿತರಕರು ನಿರಾಕರಿಸುವುದು ಅಥವಾ ತೂಕ ಮಾಡಿ ಕಡಿಮೆ ಪಡಿತರ ನೀಡುವುದನ್ನು ನಾವು ಅನೇಕ ಬಾರಿ ನೋಡಿರುವೆ. ನಿಮಗೆ ಈ ರೀತಿಯ ತೊಂದರೆಯಾದಲ್ಲಿ ಚಿಂತಿಸಬೇಡಿ. ರಾಜ್ಯವಾರು ಸಹಾಯವಾಣಿ ಸಂಖ್ಯೆಗಳನ್ನು ಸರ್ಕಾರ ನೀಡಿದೆ. ನೀವು ಕಡಿಮೆ ಪಡಿತರ ಪಡೆಯುತ್ತಿದ್ದರೆ, ನೀವು ಈ ಸಂಖ್ಯೆಗಳನ್ನು ಸಂಪರ್ಕಿಸಿ ವಿತರಕರ ವಿರುದ್ಧ ದೂರು ದಾಖಲಿಸಬಹುದು.
ಸರ್ಕಾರ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಮತ್ತು ಆಹಾರ ಧಾನ್ಯಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಕುಂದುಕೊರತೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಸಬ್ಸಿಡಿ ಪಡಿತರ ಬಡವರಿಗೆ ತಲುಪುತ್ತದೆ. ಯಾವುದೇ ಪಡಿತರ ಚೀಟಿದಾರರು ತಮ್ಮ ಆಹಾರದ ಕೋಟಾವನ್ನು ಪಡೆಯದಿದ್ದರೆ, ಅವರು ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.
ಈ ಲಿಂಕ್ ಗೆ ಭೇಟಿ ನೀಡಿ
ನಿಮ್ಮ ರಾಜ್ಯದ ಟೋಲ್ ಫ್ರೀ ಸಂಖ್ಯೆಯ ರಾಷ್ಟ್ರೀಯ ಆಹಾರ ಭದ್ರತಾ ಪೋರ್ಟಲ್ನ ಈ ಲಿಂಕ್ https://nfsa.gov.in/portal/State_UT_Toll_Free_AA ಗೆ ಭೇಟಿ ನೀಡುವ ಮೂಲಕ, ನೀವು ಎಲ್ಲಾ ರಾಜ್ಯಗಳ ಸಂಖ್ಯೆಗಳ ಮಾಹಿತಿ ಪಡೆಯಬಹುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದರೂ ಹಲವು ತಿಂಗಳುಗಳಿಂದ ಪಡಿತರ ಚೀಟಿ ಪಡೆಯಲು ಸಾಧ್ಯವಾಗದೇ ಪರದಾಡುತ್ತಿದ್ದಲ್ಲಿ ದೂರು ನೀಡಬಹುದು.
ರಾಜ್ಯವಾರು ಕುಂದುಕೊರತೆಗಳ ಸಹಾಯವಾಣಿ ಸಂಖ್ಯೆಗಳು
ಆಂಧ್ರ ಪ್ರದೇಶ – 1800-425-2977
ಅರುಣಾಚಲ ಪ್ರದೇಶ – 03602244290
ಅಸ್ಸಾಂ – 1800-345-3611
ಬಿಹಾರ- 1800-3456-194
ಛತ್ತೀಸ್ಗಢ- 1800-233-3663
ಗೋವಾ- 1800-233-0022
ಗುಜರಾತ್- 1800-233-5500
ಹರಿಯಾಣ – 1800-180-2087
ಹಿಮಾಚಲ ಪ್ರದೇಶ – 1800-180-8026
ಜಾರ್ಖಂಡ್ – 1800-345-6598, 1800-212-5512
ಕರ್ನಾಟಕ- 1800-425-9339
ಕೇರಳ- 1800-425-1550
ಮಧ್ಯಪ್ರದೇಶ – 181
ಮಹಾರಾಷ್ಟ್ರ- 1800-22-4950
ಮಣಿಪುರ- 1800-345-3821
ಮೇಘಾಲಯ- 1800-345-3670
ಮಿಜೋರಾಂ- 1860-222-222-789, 1800-345-3891
ನಾಗಾಲ್ಯಾಂಡ್ – 1800-345-3704, 1800-345-3705
ಒಡಿಶಾ – 1800-345-6724 / 6760
ಪಂಜಾಬ್ – 1800-3006-1313
ರಾಜಸ್ಥಾನ – 1800-180-6127
ಸಿಕ್ಕಿಂ – 1800-345-3236
ತಮಿಳುನಾಡು – 1800-425-5901
ತೆಲಂಗಾಣ – 1800-4250-0333
ತ್ರಿಪುರ- 1800-345-3665
ಉತ್ತರ ಪ್ರದೇಶ – 1800-180-0150
ಉತ್ತರಾಖಂಡ – 1800-180-2000, 1800-180-4188
ಪಶ್ಚಿಮ ಬಂಗಾಳ – 1800-345-5505
ದೆಹಲಿ – 1800-110-841
ಜಮ್ಮು – 1800-180-7106
ಕಾಶ್ಮೀರ – 1800-180-7011
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು – 1800-343-3197
ಚಂಡೀಗಢ – 1800-180-2068
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು – 1800-233-4004
ಲಕ್ಷದ್ವೀಪ – 1800-425-3186
ಪುದುಚೇರಿ – 1800-425-1082
ಈ ಮೂಲಕ ಪಡಿತರ ಚೀಟಿ ಪಡೆಯಬಹುದು
ನೀವು ಆಯಾ ರಾಜ್ಯದ ಅಧಿಕೃತ ಸೈಟ್ಗೆ ಹೋಗಬೇಕು. ಪಡಿತರ ಚೀಟಿ ಪಡೆಯಲು ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ಐಡಿ ಪುರಾವೆಯಾಗಿ ನೀಡಬಹುದು. ಈ ಕಾರ್ಡ್ ಇಲ್ಲದಿದ್ದರೆ ಸರ್ಕಾರ ನೀಡಿರುವ ಯಾವುದೇ ಐಡಿ ಕಾರ್ಡ್, ಹೆಲ್ತ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ನೀಡಬಹುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದರೊಂದಿಗೆ ಐದರಿಂದ 45 ರೂ. ಸಲ್ಲಿಸಿದ ನಂತರ, ಅದನ್ನು ಕ್ಷೇತ್ರ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಫಾರ್ಮ್ನಲ್ಲಿ ತುಂಬಿದ ಮಾಹಿತಿಯನ್ನು ಅಧಿಕಾರಿ ಪರಿಶೀಲಿಸುತ್ತಾರೆ. ಬಳಿಕ ಪಡಿತರ ಚೀಟಿ ನೀಡಲಾಗುವುದು.