ಕೋವಿಡ್-19 ಸಾಂಕ್ರಮಿಕದ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಸಂಬಂಧಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯುವಂಥ ವ್ಯವಸ್ಥೆಯನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಎಡಿಐ) ಆರಂಭಿಸಿದೆ.
ಈಗ ನೀವು ನಿಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಹಾಗೂ ಭಾಷೆಯ ವಿವರಗಳನ್ನು ಆನ್ಲೈನ್ ಮೂಲಕವೇ ಅಪ್ಡೇಟ್ ಮಾಡಬಹುದಾಗಿದೆ. ಈ ಅಪ್ಡೇಟ್ಗಳನ್ನು ಮಾಡಲು ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆ ಕಡ್ಡಾಯವಾಗಿದ್ದು, ಆ ಸಂಖ್ಯೆಗೆ ಬರುವ ಒಟಿಪಿ ಸಂದೇಶದ ಮೂಲಕ ವಿವರಗಳನ್ನು ಪರಿಷ್ಕರಿಸಬಹುದಾಗಿದೆ.
ಆದರೆ, ಕುಟುಂಬದ ಮುಖ್ಯಸ್ಥರು/ಪೋಷಕರು, ಬಯೋಮೆಟ್ರಿಕ್ ಅಪ್ಡೇಟ್, ಮೊಬೈಲ್ ಸಂಖ್ಯೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವಂತಹ ಕೆಲಸಗಳಿಗೆ ಆಧಾರ್ ಸೇವಾ ಕೇಂದ್ರಕ್ಕೇ ಭೇಟಿ ಕೊಡಬೇಕಾಗುತ್ತದೆ.
ಜನರಿಗೆ ಅನುಕೂಲವಾಗಲೆಂದು, ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮುನ್ನ, ಯುಐಎಡಿಐ ಜಾಲತಾಣ https://appointments.uidai.gov.in ವಿಳಾಸಕ್ಕೆ ಭೇಟಿ ಕೊಟ್ಟು ಭೇಟಿ ನೀಡಿ ಮುಂಗಡ ಬುಕಿಂಗ್ ಮಾಡುವ ಮೂಲಕ ನಿಮ್ಮ ಸಮಯ ಉಳಿತಾಯ ಮಾಡಲು ಅನುವು ಮಾಡಿಕೊಡಲಾಗಿದೆ.