ನವದೆಹಲಿ: 50 ವಸ್ತುಗಳ ಆಮದು ಸುಂಕವನ್ನು ಶೇಕಡ 5 ರಿಂದ 10 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಬಜೆಟ್ನಲ್ಲಿ ಸ್ಮಾರ್ಟ್ಫೋನ್, ಎಲೆಕ್ಟ್ರಾನಿಕ್ ಉಪಕರಣ ಸೇರಿದಂತೆ 50 ಕ್ಕೂ ಹೆಚ್ಚು ವಸ್ತುಗಳ ಮೇಲಿನ ಆಮದು ಸುಂಕದಲ್ಲಿ ಶೇಕಡ 5 ರಿಂದ 10 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶಿಯ ವಸ್ತುಗಳ ಉತ್ಪಾದನೆ ಬೆಂಬಲಿಸಲು, ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಪೂರಕವಾಗಿ ಕ್ರಮಕೈಗೊಳ್ಳಲಾಗುತ್ತದೆ. ಆಮದು ಸುಂಕ ಏರಿಕೆಯಿಂದ ಸುಮಾರು 200 ಬಿಲಿಯನ್ ರೂ. ಹೆಚ್ಚುವರಿ ಆದಾಯ ಸಂಗ್ರಹ ಗುರಿ ಹೊಂದಲಾಗಿದೆ ಎಂದು ಹೇಳಲಾಗಿದೆ.