ನವದೆಹಲಿ: ಇಂಟರ್ ನ್ಯಾಶನಲ್ ಮಾನಿಟರಿ ಫಂಡ್ (ಐಎಂಎಫ್) ಮಾಹಿತಿಯಂತೆ ಭಾರತದ ಆರ್ಥಿಕತೆ 2021 ರಲ್ಲಿ ಶೇ. 11.5 ಬೆಳವಣಿಗೆ ಕಂಡಿದೆ. ಕೋವಿಡ್ ನಂತರ ಆರ್ಥಿಕತೆಯ ಅಭಿವೃದ್ಧಿ ಜಿಗಿತ ಕಂಡಿದ್ದು ಹೆಚ್ಚು ಆಶಾದಾಯಕವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 2020 ರಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ಶೇ.8 ರಷ್ಟಿತ್ತು.
ಐಎಂಎಫ್ ಮಾಹಿತಿಯಂತೆ ಈ ವರ್ಷ ವಿಶ್ವದ ಬೃಹತ್ ಆರ್ಥಿಕತೆ ಹೊಂದಿದ ರಾಷ್ಟ್ರಗಳಲ್ಲಿ ಡಬಲ್ ಡಿಜಿಟ್ ಆರ್ಥಿಕ ಬೆಳವಣಿಗೆ ಕಂಡ ಏಕೈಕ ರಾಷ್ಟ್ರ ನಮ್ಮದಾಗಿದೆ. ಚೀನಾದಲ್ಲಿ ಶೇ. 8.1 ರಷ್ಟು, ಸ್ಪೇನ್ 5.9, ಫ್ರಾನ್ಸ್ ಶೇ. 5.5 ರಷ್ಟು ಆರ್ಥಿಕ ಬೆಳವಣಿಗೆಯಾಗಿದೆ ಎಂದು ವರದಿ ಹೇಳಿದೆ.
ʼಬಜೆಟ್ʼ ನಲ್ಲಿ ಆದಾಯ ತೆರಿಗೆ ಮಿತಿ ಹೆಚ್ಚಳ…..?
ಭಾರತದಲ್ಲಿ 2022 ರಲ್ಲಿ ಇನ್ನೂ ಹೆಚ್ಚುವರಿ ಶೇ. 6.8 ರಷ್ಟು ಆರ್ಥಿಕ ಬೆಳವಣಿಗೆಯ ನಿರೀಕ್ಷೆ ಇದೆ ಎಂದು ಐಎಂಎಫ್ ಹೇಳಿದೆ. ಜಗತ್ತಿನಲ್ಲಿ ಅತಿ ವೇಗವಾಗಿ ಆರ್ಥಿಕತೆ ಅಭಿವೃದ್ಧಿಯಾಗಯತ್ತಿರುವ ದೇಶಗಳ ಸಾಲಿಗೆ ಭಾರತ ಸೇರಿದೆ. ಚೀನಾದಲ್ಲಿ 2022 ರಲ್ಲಿ ಶೇ. 5.6 ರಷ್ಟು ಬೆಳವಣಿಗೆ ಕಾಣಲಿದೆ ಎಂದು ವಿಶ್ಲೇಷಿಸಲಾಗಿದೆ. ಕಳೆದ ಬಾರಿ ವಿಶ್ವದಲ್ಲಿ ಚೀನಾದ ಆರ್ಥಿಕತೆ ಮಾತ್ರ ಶೇ. 2.3 ಧನಾತ್ಮಕ ಅಭಿವೃದ್ಧಿ ಕಂಡಿತ್ತು.