ಕೋವಿಡ್-19 ಸಾಂಕ್ರಮಿಕದ ನಡುವೆಯೂ ಸಹ ಐಐಟಿ ಹಾಗೂ ಎನ್‌ಐಟಿಗಳಲ್ಲಿ ಪಾಸ್ ಔಟ್ ಆದ ವಿದ್ಯಾರ್ಥಿಗಳಿಗೆ ಭರ್ಜರಿ ಪ್ಯಾಕೇಜ್‌ನ ಆಫರ್‌ಗಳೊಂದಿಗೆ ಪ್ಲೇಸ್‌ಮೆಂಟ್‌ಗಳು ನಡೆಯುತ್ತಿವೆ.
ಐಐಟಿ-ಪಟನಾದಲ್ಲಿ ನಡೆದ ಕ್ಯಾಂಪಸ್ ಪ್ಲೇಸ್‌ಮೆಂಟ್‌ನ ಮೊದಲ ಹಂತದಲ್ಲಿ, ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ 40%ದಷ್ಟು ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ಕಂಪ್ಯೂಟರ್ ವಿಜ್ಞಾನದ ವಿದ್ಯಾರ್ಥಿಯೊಬ್ಬರಿಗೆ ಮೈಕ್ರೋಸಾಫ್ಟ್ 43.5 ಲಕ್ಷ ವಾರ್ಷಿಕ ವೇತನದ ಆಫರ್ ಕೊಟ್ಟಿದೆ. ಇದೇ ವಿಭಾಗದ ಮತ್ತೊಬ್ಬ ವಿದ್ಯಾರ್ಥಿಗೆ ಡಿ.ಇ ಶಾ ಸಂಸ್ಥೆಯು ವಾರ್ಷಿಕ 40 ಲಕ್ಷ ರೂ.ಗಳ ಆಫರ್ ಕೊಟ್ಟಿದೆ. ಇದೇ ವೇಳೆ ಏಳು ಇತರ ವಿದ್ಯಾರ್ಥಿಗಳಿಗೆ ತಲಾ 32 ಲಕ್ಷ ರೂ.ಗಳ ಪ್ಯಾಕೇಜ್ ಸಿಕ್ಕರೆ, ಅಮೇಜಾನ್‌ನಿಂದ ಆರು ವಿದ್ಯಾರ್ಥಿಗಳಿಗೆ ವಾರ್ಷಿಕ 31 ಲಕ್ಷ ರೂ.ಗಳ ಪ್ಯಾಕೇಜ್ ಕೊಡಲಾಗಿದೆ.