ನವದೆಹಲಿ: ವಿಲೀನಗೊಂಡ ಬ್ಯಾಂಕುಗಳಲ್ಲಿ ಏಪ್ರಿಲ್ 1 ರಿಂದ ನಿಯಮದಲ್ಲಿ ಕೆಲ ಬದಲಾವಣೆಯಾಗಿದೆ. ಗ್ರಾಹಕರು ಹೊಸ ಚೆಕ್ ಮತ್ತು ಪಾಸ್ಬುಕ್ ಪಡೆಯಬೇಕಿದೆ. ಐಎಫ್ಎಸ್ಸಿ ಕೋಡ್ ನಿಯಮದಲ್ಲಿ ಬದಲಾವಣೆಯಾಗಲಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಪೊರೇಷನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಲ್ಲಿ ದೇನಾ ಬ್ಯಾಂಕ್, ವಿಜಯ ಬ್ಯಾಂಕ್ ಹಾಗೂ ಎಸ್ಬಿಐ ನಲ್ಲಿ ವಿಲೀನಗೊಂಡ ಬ್ಯಾಂಕುಗಳು ಸೇರಿದಂತೆ ಇತ್ತೀಚೆಗೆ ವಿಲೀನವಾಗಿರುವ 8 ಬ್ಯಾಂಕುಗಳ ಚೆಕ್ ಮತ್ತು ಪಾಸ್ ಪುಸ್ತಕಗಳು ಏಪ್ರಿಲ್ 1 ರಿಂದ ಅಮಾನ್ಯಗೊಳ್ಳಲಿವೆ. ಬ್ಯಾಂಕುಗಳು ಈಗಾಗಲೇ ಎಸ್ಎಂಎಸ್ ಮೂಲಕ ಈ ಕುರಿತ ಮಾಹಿತಿಯನ್ನು ಗ್ರಾಹಕರಿಗೆ ನೀಡುತ್ತಿವೆ.
ಈ ಬ್ಯಾಂಕುಗಳ ಗ್ರಾಹಕರು ತಮ್ಮ ಚೆಕ್ ಬುಕ್ ಮತ್ತು ಪಾಸ್ ಬುಕ್ ನವೀಕರಿಸಿಕೊಳ್ಳಬೇಕಿದೆ. ಐಎಫ್ಎಸ್ಸಿ ಕೋಡ್ ನಲ್ಲಿಯೂ ಬದಲಾವಣೆಯಾಗಿದ್ದು ಕೆಲವು ಗ್ರಾಹಕರ ಸಂಖ್ಯೆಯಲ್ಲಿಯೂ ಬದಲಾಗಿರುತ್ತದೆ. ಅಗತ್ಯವಿದ್ದಲ್ಲಿ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ, ವಿಳಾಸ, ನಾಮಿನಿ ಮೊದಲಾದ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕು.
ಮ್ಯೂಚುವಲ್ ಫಂಡ್, ಡಿಮ್ಯಾಟ್ ಅಕೌಂಟ್, ಜೀವ ವಿಮೆ, ಆದಾಯ ತೆರಿಗೆ, ಎಲ್ಪಿಜಿ, ಲಾಕರ್ ಮೊದಲಾದವುಗಳಿಗೆ ಹೊಸ ಮಾಹಿತಿ ನೀಡಬೇಕಿದೆ. ವಿಲಿನಗೊಂಡ ಬ್ಯಾಂಕುಗಳ ಐಎಫ್ಎಸ್ಸಿ ಕೋಡ್ ಬದಲಾವಣೆ ಗಮನಿಸಿ ಗ್ರಾಹಕರು ಎಚ್ಚರಿಕೆಯಿಂದ ವ್ಯವಹರಿಸುವುದರ ಬಗ್ಗೆ ಗಮನಿಸಬೇಕಿದೆ ಎಂದು ಹೇಳಲಾಗಿದೆ.