ನ್ಯಾನೋ ಯೂರಿಯಾ ಗೊಬ್ಬರ ಮಾರುಕಟ್ಟೆಗೆ ಬರಲಿದೆ. ಇನ್ನು ಮುಂದೆ ರೈತರು ರಸಗೊಬ್ಬರಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಗೊಬ್ಬರದ ಚೀಲ ಹೊರಬೇಕಿಲ್ಲ. ದ್ರವರೂಪದ ಯೂರಿಯಾ ಗೊಬ್ಬರ ಮಾರುಕಟ್ಟೆಗೆ ಬರಲಿದೆ.
ಅರ್ಧ ಲೀಟರ್ ಬಾಟಲಿಗೆ 244 ರೂಪಾಯಿ ದರ ಇದೆ. ಇಫ್ಕೋ 1 ಮೂಟೆ ಯೂರಿಯಾಗೆ ಸಮನಾದ ಅರ್ಧ ಬಾಟಲಿ ದ್ರವರೂಪದ ಯೂರಿಯಾವನ್ನು ಏಪ್ರಿಲ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ನೀರಿನೊಂದಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು. 1 ಎಕರೆ ಜೋಳಕ್ಕೆ ಅರ್ಧ ಲೀಟರ್, ಭತ್ತಕ್ಕೆ 2.5 ಲೀಟರ್ ಯೂರಿಯಾ ಗೊಬ್ಬರ ಸಾಕು.
ಅರ್ಧ ಲೀಟರ್ ನ ಒಂದು ಬಾಟಲಿ ದ್ರವರೂಪದ ಯೂರಿಯಾ ಒಂದು ಚೀಲ ಯೂರಿಯಾ ಗೊಬ್ಬರದಷ್ಟೇ ಸಮನಾಗಿ ಟಾನಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.