ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆ ತೆರೆದಿದ್ದರೆ ನಾಳೆಯವರೆಗೆ ಹಣ ಠೇವಣಿ ಮಾಡಲು ಅವಕಾಶವಿದೆ. ಮಾರ್ಚ್ 31ರವರೆಗೂ ಹಣ ಠೇವಣಿ ಮಾಡದೆ ಹೋದ್ರೆ ದಂಡ ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 500 ರೂಪಾಯಿಯಿಂದ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಖಾತೆ ತೆರೆಯಬಹುದು.
ಪ್ರತಿ ವರ್ಷ ಖಾತೆಗೆ ಹಣ ಜಮಾ ಮಾಡಬೇಕಾಗುತ್ತದೆ. ನಿಗಧಿತ ಸಮಯದಲ್ಲಿ ಹಣ ಠೇವಣಿ ಮಾಡದೆ ಹೋದಲ್ಲಿ ಡಿಫಾಲ್ಟ್ ಖಾತೆಯೆಂದು ಪರಿಗಣಿಸಲಾಗುತ್ತದೆ. ಮತ್ತೆ ಖಾತೆ ಶುರು ಮಾಡಲು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಬೇಕಾಗುತ್ತದೆ. ಪ್ರತಿವರ್ಷ ಕನಿಷ್ಠ 250 ರೂಪಾಯಿ ಠೇವಣಿ ಇಡಬೇಕಾಗುತ್ತದೆ. ವಾರ್ಷಿಕ ಹಣ ಜಮಾ ಮಾಡದೆ ಹೋದಲ್ಲಿ ಕನಿಷ್ಠ ಮೊತ್ತದೊಂದಿಗೆ ವರ್ಷಕ್ಕೆ 50 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
ಹೊಸ ಬಡ್ಡಿ ದರಗಳು ಏಪ್ರಿಲ್ 1, 2021 ರಿಂದ ಜಾರಿಗೆ ಬರಲಿವೆ. 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಖಾತೆ ತೆರೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಲು ಮಗಳ ಜನನ ಪ್ರಮಾಣ ಪತ್ರವನ್ನು ಅಂಚೆ ಕಚೇರಿ ಅಥವಾ ಬ್ಯಾಂಕಿಗೆ ನೀಡಬೇಕು. ಮಗು ಮತ್ತು ಪೋಷಕರ ಗುರುತಿನ ಚೀಟಿ ನೀಡಬೇಕಾಗುತ್ತದೆ.