
ಎಲ್ಐಸಿ ನೀವು ಕೂಡ ವಿಮಾ ಪಾಲಿಸಿ ಮಾಡಿಸಿಕೊಂಡಿದ್ದರೆ ಈ ಸುದ್ದಿ ನಿಮಗೆ ಬಹಳ ಮಹತ್ವದ್ದಾಗಿದೆ.
ಭಾರತದ ಅತ್ಯಂತ ದೊಡ್ಡ ವಿಮಾ ಸಂಸ್ಥೆ ಎಲ್ಐಸಿ ಈಗಾಗಲೇ ಲ್ಯಾಪ್ಸ್ ಆಗಿರುವ ಪಾಲಿಸಿಯನ್ನ ನವೀಕರಣ ಮಾಡಲು ಅವಕಾಶ ನೀಡಿದೆ. ಮಾರ್ಚ್ 6ನೇ ತಾರೀಖಿನವರೆಗೆ ನೀವು ಲ್ಯಾಪ್ಸ್ ಆಗಿರುವ ಪಾಲಿಸಿಯನ್ನ ನವೀಕರಣ ಮಾಡಬಹುದಾಗಿದೆ.
ಈ ವಿಶೇಷ ಸೌಲಭ್ಯವನ್ನ ಎಲ್ಐಸಿ ಜನವರಿ 7ನೇ ತಾರೀಖಿನಿಂದ ಪ್ರಾರಂಭ ಮಾಡಿದೆ ಹಾಗೂ ಶನಿವಾರ ಇದು ಕೊನೆಗಾಣಲಿದೆ. ಲ್ಯಾಪ್ಸ್ ಆಗಿರುವ ವಿಮೆಯನ್ನ ಪುನಾರಂಭಿಸುವ ಮೂಲಕ ನೀವು ಜೀವ ವಿಮೆಯ ಲಾಭವನ್ನ ಪಡೆಯಬಹುದಾಗಿದೆ.
ಈ ಹೊಸ ನವೀಕರಣ ಪಾಲಿಸಿ ಅಭಿಯಾನದ ಅಡಿಯಲ್ಲಿ, ಐದು ವರ್ಷದ ಅವಧಿಯನ್ನ ಪೂರೈಸಲಾಗದೇ ಅರ್ಧಕ್ಕೆ ವಿಮೆಯನ್ನ ಕೈಬಿಟ್ಟವರು ಪುನಃ ತಮ್ಮ ಪಾಲಿಸಿಯನ್ನ ಆರಂಭಿಸಬಹುದು. ಆದರೆ ಇದಕ್ಕೆ ನೀವು ಶುಲ್ಕ ಪಾವತಿ ಮಾಡೋದ್ರ ಜೊತೆಗೆ ಕೆಲ ಷರತ್ತುಗಳಿಗೆ ಒಪ್ಪಿಗೆ ನೀಡಬೇಕಾಗುತ್ತದೆ.
ವಿಳಂಬ ಶುಲ್ಕ ಪಾವತಿ ಮಾಡುವವರಿಗೂ ಎಲ್ಐಸಿ ಕೆಲ ಆಫರ್ ನೀಡಿದೆ.
1 ಲಕ್ಷ ರೂಪಾಯಿ ವಾರ್ಷಿಕ ಪ್ರೀಮಿಯಂನಲ್ಲಿ ಗರಿಷ್ಟ 2 ಸಾವಿರ ರೂಪಾಯಿವರೆಗೆ ಶುಲ್ಕ ಭರಿಸಬೇಕಾಗಿ ಬರಬಹುದು.
ಪಾಲಿಸಿದಾರ ವಾರ್ಷಿಕ ಪ್ರೀಮಿಯಂ 1 ಲಕ್ಷದಿಂದ 3 ಲಕ್ಷ ರೂಪಾಯಿ ಆಗಿದ್ದರೆ ಅವರಿಗೆ 25 ಶೇಕಡಾ ಅಥವಾ ಅದಕ್ಕಿಂತ ಹೆಚ್ಚಿನ ರಿಯಾಯಿತಿ ಸಿಗಲಿದೆ.
3,00,001 ರೂ. ಹಾಗೂ ಇದಕ್ಕಿಂತ ಹೆಚ್ಚಿನ ಪ್ರೀಮಿಯಂನಲ್ಲಿ 3 ಸಾವಿರ ರೂಪಾಯಿವರೆಗೆ ರಿಯಾಯಿತಿ ಸಿಗಲಿದೆ.
ಆದರೆ ಹೆಲ್ತ್ ಇ್ಶೂರೆನ್ಸ್, ಟರ್ಮ್ ಇನ್ಶೂರೆನ್ಸ್ ಸೇರಿದಂತೆ ವಿವಿಧ ಹೈ ರಿಸ್ಕ್ ಪ್ಲಾನ್ಗಳಲ್ಲಿ ನಿಮಗೆ ವಿಳಂಬ ಶುಲ್ಕಕ್ಕೆ ಯಾವುದೇ ವಿನಾಯಿತಿ ಇರೋದಿಲ್ಲ.