ಮೊಬೈಲ್ ನಂಬರ್ ಫ್ಯಾನ್ಸಿಯಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಈ ನಂಬರ್ ಗಳನ್ನು ನೆನೆಪಿಟ್ಟುಕೊಳ್ಳುವುದು ಸುಲಭ. ಫ್ಯಾನ್ಸಿ ಹಾಗೂ ವಿಐಪಿ ನಂಬರ್ ಪಡೆಯುವುದು ಸುಲಭ.
ಬಿಎಸ್ಎನ್ಎಲ್ ಫ್ಯಾನ್ಸಿ ಅಥವಾ ವಿಐಪಿ ನಂಬರ್ ಬೇಕೆನ್ನುವವರು ಮೊದಲು ಗೂಗಲ್‌ಗೆ ಹೋಗಿ ಬಿಎಸ್‌ಎನ್‌ಎಲ್ ಚಾಯ್ಸ್ ಸಂಖ್ಯೆಯನ್ನು ಸರ್ಚ್ ಮಾಡಬೇಕು. ಮೇಲೆ ಕೊಟ್ಟಿರುವ ಸಿವೈಎಂಎನ್ ವೆಬ್ ಸೈಟ್ ಕ್ಲಿಕ್ ಮಾಡಬೇಕು.
ಈ ಪೇಜ್ ತೆರೆದ ತಕ್ಷಣ, ಒಂದು ವಿಂಡೋ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ರಾಜ್ಯದ ಹೆಸರಿರುತ್ತದೆ. ನಿಮ್ಮ ರಾಜ್ಯದ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಪುಟ ತೆರೆಯುತ್ತದೆ. ಅದರಲ್ಲಿ ನೀಡಲಾದ ಸ್ಲೈಡರ್ ಅನ್ಲಾಕ್ ಮಾಡಬೇಕು. ಆಗ ಕೆಲ ಫೋನ್ ನಂಬರ್ ನಿಮಗೆ ಕಾಣಿಸುತ್ತದೆ. ವಿಐಪಿ, ಫ್ಯಾನ್ಸಿ ನಂಬರ್ ಇದ್ರಲ್ಲಿ ಯಾವುದು ಬೇಕೋ ಅದರ ಮೇಲೆ ಕ್ಲಿಕ್ ಮಾಡಬೇಕು.
ಇನ್ನೊಂದು ಪೇಜ್ ತೆರೆಯುತ್ತದೆ. ಅದ್ರಲ್ಲಿ ಫೋನ್ ನಂಬರ್ ಹಾಗೂ ಅದ್ರ ಹಣದ ವಿವರವಿರುತ್ತದೆ. ನಿಮಗೆ ಬೇಕಾದ ನಂಬರ್ ಮೇಲೆ ಕ್ಲಿಕ್ ಮಾಡಿ ಮೀಸಲು ಸಂಖ್ಯೆ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಹಳೆ ಮೊಬೈಲ್ ನಂಬರ್ ನಮೂದಿಸಬೇಕು. ನಿಮ್ಮ ಹಳೆ ನಂಬರ್ ಗೆ ಬರುವ ಪಿನ್ ಅನ್ನು ಅಲ್ಲಿ ನಮೂದಿಸಬೇಕು. ಆಗ ನಿಮ್ಮ ಸಂಖ್ಯೆ ಕಾಯ್ದಿರಿಸಲಾಗುತ್ತದೆ. ನಂತ್ರ ಅಪ್ಲಿಕೇಶನ್ ಕ್ಲಿಕ್ ಮಾಡಿ ಅದನ್ನು ಭರ್ತಿ ಮಾಡಬೇಕು. ನಿಮ್ಮ ಹತ್ತಿರದ ಕಚೇರಿಗೆ ಹೋಗಿ ಕೂಡ ನೀವು ಈ ಅರ್ಜಿ ಭರ್ತಿ ಮಾಡಬಹುದು. ಅರ್ಜಿ ಜೊತೆ ಹಣ ಪಾವತಿಸಿ ಫ್ಯಾನ್ಸಿ ನಂಬರ್ ಪಡೆಯಬಹುದು.