alex Certify BIG BREAKING: ಬ್ಯಾಂಕ್ ಠೇವಣಿದಾರರಿಗೆ ಕೇಂದ್ರ ಬಜೆಟ್ ನಲ್ಲಿ ‘ನೆಮ್ಮದಿ’ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಬ್ಯಾಂಕ್ ಠೇವಣಿದಾರರಿಗೆ ಕೇಂದ್ರ ಬಜೆಟ್ ನಲ್ಲಿ ‘ನೆಮ್ಮದಿ’ ಸುದ್ದಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು 2021-22 ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು, ಈ ವೇಳೆ ಬ್ಯಾಂಕ್ ಠೇವಣಿದಾರರಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದಾರೆ.

ಬ್ಯಾಂಕ್ ಠೇವಣಿದಾರರ ಠೇವಣಿ ಮೇಲಿನ ವಿಮಾ ಮೊತ್ತವನ್ನು ಈಗಾಗಲೇ ಒಂದು ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದ್ದು, ಒಂದೊಮ್ಮೆ ಬ್ಯಾಂಕ್‌ ವಿಫಲವಾದರೆ ಈ ಮೊತ್ತ ತಕ್ಷಣವೇ ಠೇವಣಿದಾರರಿಗೆ ಸಿಗಲಿದೆ ಎಂದಿದ್ದಾರೆ.

ಈ ಮೊದಲು ಬ್ಯಾಂಕುಗಳು ದಿವಾಳಿಯೆದ್ದ ಸಂದರ್ಭದಲ್ಲಿ ಠೇವಣಿದಾರರು ಕಂಗಾಲಾಗಿ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿತ್ತು. ಹೀಗಾಗಿ ಠೇವಣಿ ಮೇಲಿನ ವಿಮಾ ಮೊತ್ತವನ್ನು ಒಂದು ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಿದ್ದು ಆ ಮೊತ್ತವನ್ನು 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿತ್ತು.

ಬ್ಯಾಂಕ್‌ ಠೇವಣಿದಾರರ ಮೊತ್ತವನ್ನು ಹಿಂದಿರುಗಿಸಲು ವಿಫಲವಾದರೆ ಅಥವಾ ಬ್ಯಾಂಕ್‌ ಮುಚ್ಚಲ್ಪಟ್ಟರೆ ಅವರು ಠೇವಣಿಯಿಟ್ಟಿರುವ ಹಣಕ್ಕನುಗುಣವಾಗಿ ತಕ್ಷಣವೇ 5 ಲಕ್ಷ ರೂಪಾಯಿಗಳವರೆಗೆ ಮರು ಪಾವತಿ ಸಿಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...