ಕೊರೊನಾ ಬಿಕ್ಕಟ್ಟಿನ ಮಧ್ಯೆ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಪ್ರಸ್ತುತ ಐಡಿಎಫ್‌ಸಿ ಬ್ಯಾಂಕ್ 1 ಲಕ್ಷಕ್ಕಿಂತ ಕಡಿಮೆ ಠೇವಣಿಗಳ ಮೇಲೆ ಶೇಕಡಾ 6 ರಷ್ಟು ಬಡ್ಡಿ ನೀಡುವ ಏಕೈಕ ಬ್ಯಾಂಕ್ ಆಗಿತ್ತು. ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವನ್ನು ಮೇ 1 ರಿಂದ ಕಡಿಮೆ ಮಾಡಲು ಐಡಿಎಫ್‌ಸಿ ಬ್ಯಾಂಕ್ ನಿರ್ಧರಿಸಿದೆ. ಇಂದಿನಿಂದ ಹೊಸ ದರಗಳು ಜಾರಿಗೆ ಬರಲಿವೆ.
ಖಾತೆಯಲ್ಲಿ 1 ಲಕ್ಷಕ್ಕಿಂತ ಕಡಿಮೆ ಬಾಕಿ ಉಳಿಸಿಕೊಂಡವರಿಗೆ ಶೇಕಡಾ 4ರಷ್ಟು ಬಡ್ಡಿ ಸಿಗಲಿದೆ. 1 ಲಕ್ಷ ಮತ್ತು 10 ಲಕ್ಷದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಗ್ರಾಹಕರಿಗೆ ಶೇಕಡಾ 4.5 ರಷ್ಟು ಬಡ್ಡಿ ದರ ಸಿಗಲಿದೆ. ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣವಿದ್ದಲ್ಲಿ ಶೇಕಡಾ 5 ರಷ್ಟು ಬಡ್ಡಿಯನ್ನು ಬ್ಯಾಂಕ್ ನೀಡಲಿದೆ.
ಸದ್ಯ ಐಸಿಐಸಿಐ ಬ್ಯಾಂಕ್ ಶೇಕಡಾ 3ರಿಂದ3.5 ರಷ್ಟು ಬಡ್ಡಿ ದರಗಳನ್ನು ನೀಡುತ್ತಿದೆ. ಎಸ್‌ಬಿಐ ಶೇಕಡಾ 2.7 ರಷ್ಟು ಬಡ್ಡಿ ನೀಡ್ತಿದೆ. ಹೆಚ್ಚಿನ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಉಳಿತಾಯದ ಮೇಲೆ ಶೇಕಡಾ 3 ರಿಂದ 3.5 ರಷ್ಟು ಬಡ್ಡಿ ನೀಡ್ತಿವೆ.
ಖಾಸಗಿ ವಲಯದ ಇಂಡಸ್ಇಂಡ್ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಿದೆ. ಇಂಡಸ್ಇಂಡ್ ಬ್ಯಾಂಕ್ ಈಗ 7 ರಿಂದ 30 ದಿನಗಳ ಮುಕ್ತಾಯದ ಠೇವಣಿಗಳ ಮೇಲೆ ಶೇಕಡಾ 2.75ರಷ್ಟು ಬಡ್ಡಿಯನ್ನು ನೀಡ್ತಿದೆ. ಇಂಡಸ್ಇಂಡ್ ಬ್ಯಾಂಕ್ 31 ರಿಂದ 45 ದಿನಗಳ ಮುಕ್ತಾಯದ ಠೇವಣಿಗಳ ಮೇಲೆ ಶೇಕಡಾ 3ರಷ್ಟು ಬಡ್ಡಿ, 46 ರಿಂದ 60 ದಿನಗಳ ಮುಕ್ತಾಯದ ಮೇಲೆ ಶೇಕಡಾ 3.50ರಷ್ಟು ಬಡ್ಡಿ ನೀಡ್ತಿದೆ.